ಡ್ರೋನ್ ಮೂಲಕ ದಾಳಿ ನಡೆಸಿ ಇರಾಕ್ ಪ್ರಧಾನಿ ಹತ್ಯೆಗೆ ಯತ್ನ
ಡ್ರೋನ್ ಮೂಲಕ ದಾಳಿ ನಡೆಸಿದ್ದ ಭಯೋತ್ಪಾದಕರು; ಅತಿ ಭದ್ರತೆಯ ನಡುವೆಯೂ ಪ್ರಧಾನಿ ನಿವಾಸದ ಮೇಲೆ ದಾಳಿ
Team Udayavani, Nov 7, 2021, 8:45 PM IST
ಬಾಗ್ಧಾದ್: ಇರಾಕ್ ಪ್ರಧಾನಿ ಮುಸ್ತಾಫಾ ಅಲ್-ಕಧಿಮಿ ಅವರ ನಿವಾಸದ ಮೇಲೆ, ಭಾನುವಾರ ಶಸ್ತ್ರಸಜ್ಜಿತ ಡ್ರೋನ್ಗಳಿಂದ ಭಯೋತ್ಪಾದಕರು ದಾಳಿ ನಡೆಸಿದ್ದು, ಈ ಮಾರಣಾಂತಿಕ ದಾಳಿಯಿಂದ ಕಧಿಮಿ ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಈವರೆಗೆ, ಸೇನಾ ನೆಲೆಗಳು ಇತ್ಯಾದಿ ಗೌಪ್ಯ ತಾಣಗಳ ಮೇಲೆ ದಾಳಿ ನಡೆಸಲು ಡ್ರೋನ್ಗಳನ್ನು ಬಳಸಲಾಗಿದೆ. ಆದರೆ, ಪ್ರಧಾನಿ ಹುದ್ದೆಯಲ್ಲಿರುವಂಥ ವ್ಯಕ್ತಿಯೊಬ್ಬರ ಹತ್ಯೆಗೆ ಡ್ರೋನ್ ಬಳಸಿರುವುದು ಇದೇ ಮೊದಲು ಎನ್ನಲಾಗಿದೆ.
ಪ್ರಧಾನಿಯವರ ಅಧಿಕೃತ ನಿವಾಸವಿರುವ, ಅತ್ಯಂತ ಬಿಗಿಭದ್ರತೆಯುಳ್ಳ ಗ್ರೀನ್ ಝೋನ್ನಲ್ಲಿ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಆಗಮಿಸಿದ ಎರಡು ಶಸ್ತ್ರಸಜ್ಜಿತ ಡ್ರೋನ್ಗಳು ಬಂಗಲೆಯ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದವು. ಘಟನೆಯಲ್ಲಿ ಮುಸ್ತಾಫಾರ ಏಳು ಅಂಗರಕ್ಷಕರಿಗೆ ಗಾಯಗಳಾಗಿವೆ.
ಇದನ್ನೂ ಓದಿ:ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ
ಘಟನೆಯ ನಂತರ ಟ್ವೀಟ್ ಮಾಡಿರುವ ಮುಸ್ತಾಫಾ, “ದಾಳಿಯಲ್ಲಿ ನನಗೇನೂ ಆಗಿಲ್ಲ. ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ’ ಎಂದಿದ್ದಾರೆ.
ಕಳೆದ ತಿಂಗಳು ನಡೆದಿದ್ದ ಸಂಸದೀಯ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಮುಸ್ತಾಫಾ ಅವರು ಇರಾಕ್ನ ಅಧ್ಯಕ್ಷರಾಗಿ ನೇಮಕಗೊಂಡಿದ್ದನ್ನು, ಇರಾನ್ ಬೆಂಬಲಿತ ಉಗ್ರರ ಪಡೆ ಸಹಿಸದೆ ಈ ದಾಳಿ ನಡೆಸಿವೆ ಎಂದು ಇರಾಕ್ನ ಭದ್ರತಾ ಪಡೆಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ