ಐಸಿಸ್‌ ಉಗ್ರಗಾಮಿಗಳ ಸೆರೆ

Team Udayavani, Feb 27, 2018, 9:45 AM IST

ಜೊಹಾನ್ಸ್‌ಬರ್ಗ್‌: ಬ್ರಿಟನ್‌ನ ದಂಪತಿಯನ್ನು ಅಪಹರಿಸಿದ ಆರೋಪದಲ್ಲಿ ಭಾರತೀಯ ಮೂಲದ 27 ವರ್ಷದ ಮಹಿಳೆ ಫಾತಿಮಾ ಪಟೇಲ್‌ ಹಾಗೂ ಆಕೆಯ ಸಂಗಾತಿ ಸಫಿದೀನ್‌ ಅಸ್ಲಮ್‌ ದೆಲ್‌ ವೆಚೊÂàರನ್ನು ದಕ್ಷಿಣ ಆಫ್ರಿಕಾ ಪೊಲೀಸರು ಬಂಧಿಸಿದ್ದು, ಇವರು ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆಯ ಜತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಫೆ.12ರಂದು ಬ್ರಿಟಿಷ್‌ ದಂಪತಿಯನ್ನು ಅಪಹರಿಸಿದ್ದರು ಎಂದು ಕೇಪ್‌ ಟೌನ್‌ ಪೊಲೀಸರು ಹೇಳಿದ್ದಾರೆ.

ಬ್ರಿಟಿಷ್‌ ದಂಪತಿಯನ್ನು ಅಪಹರಿಸಿ ಅವರ ಬಳಿ ಇದ್ದ ಕ್ರೆಡಿಟ್‌ ಕಾರ್ಡ್‌ಗಳು ಹಾಗೂ ಹಣವನ್ನು ದೋಚಿ, ಚಿನ್ನಾಭರಣಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳನ್ನು ಇವರು ಖರೀದಿಸಿದ್ದಾರೆ. ಬ್ರಿಟಿಷ್‌ ದಂಪತಿಗಳು ನಾಪತ್ತೆಯಾಗುತ್ತಿದ್ದಂತೆಯೇ ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರಿಗೆ, ಅರೋಪಿಗಳು ಕಾರ್ಡ್‌ ಬಳಸಿ ಖರೀದಿ ಮಾಡಿದ ಸುಳಿವು ಸಿಕ್ಕಿತ್ತು. ಇದರಿಂದ ಬಂಧಿಸಲು ಸುಲಭವಾಗಿತ್ತು. ಈ ಹಿಂದೆಯೂ ವೆಚೊà ಐಸಿಸ್‌ ಧ್ವಜವನ್ನು ಹಾರಿಸಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ. ಅಲ್ಲದೆ ಐಸಿಸ್‌ ಬೆಂಬಲಿಸುವ ಅಂತರ್ಜಾಲ ತಾಣ ದಲ್ಲಿ ಸಕ್ರಿಯವಾಗಿದ್ದ ಎಂಬ ಆರೋಪವನ್ನೂ ವೆಚೊÂà ಹೊಂದಿದ್ದ ಎನ್ನಲಾಗಿದೆ. ಈ ಆರೋಪಗಳನ್ನು ಆಧರಿಸಿ ಹಿಂದೊಮ್ಮೆ ವೆಚೊÂàನನ್ನು ಬಂಧಿಸಲಾಗಿ ತ್ತಾದರೂ ಅನಂತರ ಬಿಡುಗಡೆ ಮಾಡಲಾಗಿತ್ತು. ಇನ್ನೊಂದೆಡೆ, ಫಾತಿಮಾ ಪಟೇಲ್‌ ಹಾಗೂ ಆಕೆಯ ಸೋದರ ಇಬ್ರಾಹಿಂ ಪಟೇಲ್‌ರನ್ನು ಈ ಹಿಂದೆ ಐಸಿಸ್‌ ಹೆಸರಿನಲ್ಲಿ ಉಗ್ರ ಕೃತ್ಯ ನಡೆಸುವ ಸಂಚು ಹೂಡಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ