ಐಸಿಸ್ ದಾಳಿ: 39 ಸಾವು : ಅಫ್ಘಾನಿಸ್ಥಾನದ ಜಲಾಲಾಬಾದ್ ಜೈಲಿಗೆ ನುಗ್ಗಿದ ಉಗ್ರರು
Team Udayavani, Aug 4, 2020, 6:20 AM IST
ಕಾಬೂಲ್: ಪೂರ್ವ ಅಫ್ಘಾನಿಸ್ಥಾನದ ನಂಗರ್ಹಾರ್ ಜೈಲಿನ ಮೇಲೆ ರವಿವಾರ ರಾತ್ರೋರಾತ್ರಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ದಾಳಿ ನಡೆಸಿದ್ದಾರೆ.
ಬರೋಬ್ಬರಿ 20 ಗಂಟೆ ನಡೆದ ಕಾಳಗ ಸೋಮವಾರ ಮುಕ್ತಾಯವಾಗಿದೆ.
ಈ ಘರ್ಷಣೆಯಲ್ಲಿ 39 ಮಂದಿ ಅಸುನೀಗಿದ್ದಾರೆ ಮತ್ತು 50ಕ್ಕೂ ಹೆಚ್ಚು ಅಧಿಕ ಮಂದಿಗೆ ಗಾಯಗಳಾಗಿವೆ.
ಅನೇಕ ಐಸಿಸ್ ಉಗ್ರರೂ ಇದ್ದಂತಹ ಜೈಲಿನ ಮೇಲೆ ರವಿವಾರ ರಾತ್ರಿ ದಾಳಿ ನಡೆದಿದೆ. ಐಸಿಸ್ನ ಆತ್ಮಾಹುತಿ ದಾಳಿಕೋರನು ಸ್ಫೋಟಕಗಳನ್ನು ತುಂಬಿದ ವಾಹನವೊಂದನ್ನು ಜೈಲಿನ ಪ್ರವೇಶ ದ್ವಾರದೊಳಕ್ಕೆ ನುಗ್ಗಿಸಿದ್ದಾನೆ.
ಜತೆಗೆ ಇತರ ಉಗ್ರರು ಏಕಾಏಕಿ ಗುಂಡಿನ ಮಳೆಗರೆಯಲು ಆರಂಭಿಸಿದ್ದಾರೆ. ಈ ವೇಳೆ ಜೈಲಿನೊಳಗಿನ ಭದ್ರತಾ ಸಿಬಂದಿಯೂ ಪ್ರತಿದಾಳಿ ನಡೆಸಿದ್ದು, ಐವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆ ಈ ದಾಳಿಯಲ್ಲಿ ಕೈದಿಗಳು, ನಾಗರಿಕರು, ಭದ್ರತಾ ಸಿಬ್ಬಂದಿ ಸೇರಿದಂತೆ 21 ಮಂದಿ ಮೃತಪಟ್ಟಿದ್ದಾರೆ ಎಂದು ನಂಗರ್ಹಾರ್ ಪ್ರಾಂತ್ಯದ ಗವರ್ನರ್ ವಕ್ತಾರ ಅತಾವುಲ್ಲಾ ಖೋಗ್ಯಾನಿ ತಿಳಿಸಿದ್ದಾರೆ.
ಕಾಬೂಲ್ನಿಂದ 115 ಕಿ.ಮೀ. ದೂರದ ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ನ ಜೈಲಿನಲ್ಲಿ ಈ ಘಟನೆ ನಡೆದಿದೆ. ಅಫ್ಘಾನ್ನಲ್ಲಿರುವ ಐಎಸ್ ಖೊರಾ ಸಾನ್ ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯ ಉದ್ದೇಶವೇನೆಂದು ತಿಳಿದುಬಂದಿಲ್ಲ. ಆದರೆ, ಘರ್ಷಣೆ ವೇಳೆ ಕೆಲವು ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಜೈಲಲ್ಲಿ 1,500ರಷ್ಟು ಕೈದಿಗಳಿದ್ದು, ಆ ಪೈಕಿ ನೂರಾರು ಮಂದಿ ಐಸಿಸ್ ಉಗ್ರರೇ ಆಗಿದ್ದಾರೆ.
ಅಫ್ಘಾನ್ ಗುಪ್ತಚರ ಸಂಸ್ಥೆಯು ಖೊರಾಸಾನ್ನ ಹಿರಿಯ ಕಮಾಂಡರ್ನನ್ನು ಹತ್ಯೆಗೈದ ಮಾರನೇ ದಿನವೇ ಈ ದಾಳಿ ನಡೆದಿದೆ. ಇದೇ ವೇಳೆ ಜೈಲಿನ ಮೇಲೆ ದಾಳಿ ಪ್ರಕರಣದಲ್ಲಿ ತನ್ನ ಕೈವಾಡ ಇಲ್ಲವೆಂದು ತಾಲಿಬಾನ್ ಉಗ್ರ ಸಂಘಟನೆ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!