ನ್ಯೂಜಿಲ್ಯಾಂಡ್ ಘಟನೆಗೆ ಪ್ರತೀಕಾರ; ಲಂಕಾದಲ್ಲಿ ಭೀಕರ ಸ್ಫೋಟ ನಡೆಸಿದ್ದು ನಾವೇ ಎಂದ ಐಸಿಸ್!

Team Udayavani, Apr 23, 2019, 5:17 PM IST

ಕೈರೋ:ಈಸ್ಟರ್ ಸಂಭ್ರಮದ ರವಿವಾರ ಶ್ರೀಲಂಕಾದ ಚರ್ಚ್, ಹೋಟೆಲ್ ಸಹಿತ 8 ಕಡೆ ನಡೆದ ಭೀಕರ ಸರಣಿ ಸ್ಫೋಟದಲ್ಲಿ ಎಂಟು ಮಂದಿ ಭಾರತೀಯರು ಸೇರಿದಂತೆ 321 ಸಾವನ್ನಪ್ಪಿರುವ ಘಟನೆಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ.

ಶ್ರೀಲಂಕಾದಲ್ಲಿ ಒಟ್ಟು 4 ಚರ್ಚ್ ಹಾಗೂ 4 ಹೋಟೆಲ್ ಗಳ ಮೇಲೆ ಕ್ರಿಶ್ಚಿಯನ್ ರನ್ನೇ ಗುರಿಯಾಗಿರಿಸಿಕೊಂಡು ಸರಣಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿತ್ತು. ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡ ಬಗ್ಗೆ ಐಸಿಸ್ ಮುಖವಾಣಿ ಅಮಾಖ್(ಎಎಂಎಕ್ಯೂ)ನಲ್ಲಿ ಘೋಷಿಸಿದೆ.

ಅಮೆರಿಕ ಮೈತ್ರಿ ದೇಶದ ಸದಸ್ಯರು ಹಾಗೂ ಶ್ರೀಲಂಕಾದ ಕ್ರಿಶ್ಚಿಯನ್ ರನ್ನು ಗುರಿಯಾಗಿರಿಸಿ ದಾಳಿ ನಡೆಸಿರುವುದಾಗಿ ಐಸಿಸ್ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ದಾಳಿ ನಡೆಸಿರುವುದಕ್ಕೆ ಉಗ್ರಗಾಮಿ ಸಂಘಟನೆ ಯಾವುದೇ ಪುರಾವೆ ಕೊಟ್ಟಿಲ್ಲ ಎಂದು ಎಂದು ವರದಿ ಹೇಳಿದೆ.

ನ್ಯೂಜಿಲ್ಯಾಂಡ್ ನಲ್ಲಿ ಇತ್ತೀಚೆಗೆ ಮಸೀದಿ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ಈಸ್ಟರ್ ನಂದು ದಾಳಿ ನಡೆಸಲಾಗಿದೆ ಎಂದು ಶ್ರೀಲಂಕಾ ಅಧಿಕಾರಿಗಳು ಮಂಗಳವಾರ ತಿಳಿಸಿದ್ದರು. ರವಿವಾರದ ಸರಣಿ ಸ್ಫೋಟದ ಹಿಂದೆ ದೇಶೀಯ ಎರಡು ಇಸ್ಲಾಂ ಸಂಘಟನೆಗಳು ಕೈಜೋಡಿಸಿರುವ ಸಾಧ್ಯತೆ ಇದ್ದಿರುವುದಾಗಿಯೂ ಪೊಲೀಸರು ಶಂಕಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ