ಪ್ಯಾಲೆಸ್ತೀನ್ ಉಗ್ರರಿಂದ ಮೂವರು ಇಸ್ರೇಲಿಯನ್ನರ ಹತ್ಯೆ
Team Udayavani, May 6, 2022, 9:15 PM IST
ಟೆಲ್ ಅವೀವ್: ಇಸ್ರೇಲ್ನ ಸ್ವಾತಂತ್ರ್ಯ ದಿನದಂದೇ ಪ್ಯಾಲೆಸ್ತೀನಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕಟ್ಟರ್ ಸಂಪ್ರದಾಯವಾದಿ ನಗರವಾದ ಎಲಾಡ್ನಲ್ಲಿ ಗುರುವಾರ ರಾತ್ರಿ ಕೊಡಲಿ ಹಿಡಿದು ನುಗ್ಗಿದ ಇಬ್ಬರು ಉಗ್ರರು, ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮ ಮೂವರು ಇಸ್ರೇಲಿಯನ್ನರು ಸ್ಥಳದಲ್ಲೇ ಅಸುನೀಗಿದರೆ, ನಾಲ್ವರು ಗಾಯಗೊಂಡಿದ್ದಾರೆ.
45 ದಿನಗಳ ಅವಧಿಯಲ್ಲಿ ನಡೆದ ಇಂಥದ್ದು 7ನೇ ಘಟನೆ. ಒಟ್ಟಾರೆಯಾಗಿ 19 ಇಸ್ರೇಲಿಯನ್ನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರನ್ನು ವೆಸ್ಟ್ ಬ್ಯಾಂಕ್ನ ಜೆನಿನ್ ಎಂಬ ಪ್ರದೇಶದವರಾದ ಅಸಾದ್ ಅಲ್ ರಫಾನಿ(19) ಮತ್ತು ಸಭಿ ಅಬು ಶಾಕಿರ್(20) ಎಂದು ಗುರುತಿಸಲಾಗಿದೆ.
ಕೊಡಲಿ ಮತ್ತು ಚಾಕು ಹಿಡಿದುಕೊಂಡು ರಾತ್ರಿ ನಗರಕ್ಕೆ ನುಗ್ಗಿದ ಇವರು ಆ್ಯಂಫಿಥಿಯೇಟರ್ ಪಾರ್ಕ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಿಕ್ಕವರೆಲ್ಲರ ಮೇಲೆ ದಾಳಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ