ವಿಜ್ಞಾನಿಯ ಕೊಲೆಗೆ ಇಸ್ರೇಲ್ ಕಾರಣ?
ಅತ್ಯಾಧುನಿಕ ಎಲೆಕ್ಟ್ರಾನಿಕ್ ವಸ್ತುಗಳ ಬಳಸಿ ಹತ್ಯೆ: ಇರಾನ್ ಆರೋಪ
Team Udayavani, Dec 1, 2020, 6:15 AM IST
ಟೆಹ್ರಾನ್: ಕಳೆದ ಶುಕ್ರವಾರ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ತಮ್ಮ ದೇಶದ ಅಣ್ವಸ್ತ್ರ ವಿಜ್ಞಾನಿ ಮೋಹ್ಸೆನ್ ಫಕೀರ್‌ಜಾದೆ ಸಾವಿಗೆ ಇಸ್ರೇಲ್ ಕಾರಣ ಎಂದು ಇರಾನ್ ಆಪಾದಿಸಿದೆ. ಇಸ್ರೇಲ್ ಅತ್ಯಾಧುನಿಕ “ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು’ ಬಳಸಿ ಮೋಹ್ಸೆನ್ ಕೊಲೆ ಮಾಡಿದೆ ಎನ್ನುತ್ತಾರೆ ಇರಾನ್‌ನ ಭದ್ರತಾಪಡೆಯ ಹಿರಿಯ ಅಧಿಕಾರಿ ಅಲಿ ಶಮ್ಖನಿ.
ಮೋಹ್ಸೆನ್ ಫಕೀರ್‌ಜಾದೆ ತಮ್ಮ ಕಾರಿನಲ್ಲಿ ಟೆಹ್ರಾನ್‌ನ ಹೊರವಲಯದಲ್ಲಿ ಸಂಚರಿಸುತ್ತಿದ್ದಾಗ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಭಾನುವಾರ ಇರಾನ್‌ನ ಆಂಗ್ಲವಾಹಿನಿಗಳು, ಅಣ್ವಸ್ತ್ರ ವಿಜ್ಞಾನಿಯನ್ನು ಕೊಂದ ಅಸ್ತ್ರ ಇಸ್ರೇಲ್‌ನಲ್ಲಿ ತಯಾರಾಗಿದೆ ಎನ್ನುವುದನ್ನು ಅದರ ಮೆಲಿನ ಲೋಗೋ ಹಾಗೂ ಇಸ್ರೇಲ್ ಮಿಲಿಟರಿ ಇಂಡಸ್ಟ್ರಿಯಲ್ಲಿ ಉತ್ಪಾದನೆಯಾದ ಕೆಲ ಗುರುತುಗಳೇ ಸಾರುತ್ತಿವೆ ಎಂದಿವೆ.
ನವದೆಹಲಿಯಲ್ಲಿರುವ ಇರಾನ್‌ನ ರಾಯಭಾರ ಕಚೇರಿಯು, ಅಂತಾರಾಷ್ಟ್ರೀಯ ಸಮುದಾಯವು ಈ ಉಗ್ರ ಕೃತ್ಯವನ್ನು ಖಂಡಿಸಬೇಕು ಎಂದು ಆಗ್ರಹಿಸಿದೆ. ಮೋಹ್ಸೆನ್ ಫಕೀರ್‌ಜಾದೇಹ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಇರಾನ್ ಅಧ್ಯಕ್ಷ ಹಸನ್ ರೋಹಾನಿ, ಹಿರಿಯ ವಿಜ್ಞಾನಿಯ ಕೊಲೆಗೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಈ ಕುಕೃತ್ಯದಲ್ಲಿ ಇಸ್ರೇಲ್‌ನ ಪಾತ್ರ ಕಾಣಿಸುತ್ತಿದ್ದು, ಅದು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅಂತಾರಾಷ್ಟ್ರೀಯ ಸಮುದಾಯವು ತಮ್ಮ ನಾಚಿಕೆಗೇಡಿನ ಇಬ್ಬಗೆತನ ಬಿಟ್ಟು, ಇಸ್ರೇಲ್ ಪ್ರಾಯೋಜಿತ ಈ ಉಗ್ರ ಕೃತ್ಯವನ್ನು ಖಂಡಿಸಬೇಕು ಎಂದಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೋಣದ ಜತೆ 9 ವರ್ಷದ ಬಾಲಕನ ಕಂಬಳ ಓಟ ಪ್ರಾಕ್ಟಿಸ್! ಕಂಬಳದಲ್ಲೇ ಸಾಧನೆ ಮಾಡಬೇಕೆಂಬ ಹಂಬಲವಂತೆ
ಫೆ. 1ರಿಂದ 9 ಮತ್ತು 11ನೇ ತರಗತಿಗಳೂ ಆರಂಭ : ಸಚಿವ ಸುರೇಶ್ ಕುಮಾರ್
ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಕಾಂಗ್ರೇಸ್ ನೇತೃತ್ವದ 16 ಪ್ರತಿಪಕ್ಷಗಳ ಘೋಷಣೆ
ಈ ವಿದ್ಯಾರ್ಥಿನಿ ಏಕ್ ದಿನ ಕಾ ಸಿಇಓ !
ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ