ಒಂದು ಕೆಜಿ ಚಹಾ ಎಲೆ ಬೆಲೆ 11 ಲಕ್ಷ ರೂ.! ಜಪಾನ್ ಸಮಿದೋರಿಗೆ ಚಿನ್ನದ ಬೆಲೆ
Team Udayavani, Apr 21, 2022, 10:35 AM IST
ಟೋಕಿಯೋ: ಒಂದು ಕೆಜಿ ಚಹಾ ಪುಡಿ ಬೆಲೆ ಎಷ್ಟಿರಬಹುದು? ನೂರು, ಸಾವಿರದ ಲೆಕ್ಕವನ್ನು ನೀವು ಎಣಿಸಿದ್ದರೆ ನೀವು ಲೆಕ್ಕ ತಪ್ಪಿದ್ದೀರಿ. ಏಕೆಂದರೆ ಜಪಾನ್ನ ಒಂದು ಕೆಜಿ ಚಹಾ ಎಲೆ ಬೆಲೆ ಬರೋಬ್ಬರಿ 11.65 ಲಕ್ಷ ರೂ.!
ಹೌದು ಚಹಾ ಎಲೆ ಬೆಳೆಗೆ ಪ್ರಸಿದ್ಧವಾಗಿರುವ ಜಪಾನ್ನಲ್ಲಿ ಸಮಿದೋರಿ ಹೆಸರಿನ ಅತ್ಯಂತ ದುಬಾರಿಯ ಚಹಾ ಎಲೆ ಬೆಳೆಯಲಾಗುತ್ತದೆ. ಅದರ ಹರಾಜು ಪ್ರಕ್ರಿಯೆ ಸೋಮವಾರ ಜಪಾನ್ನ ಚಹಾ ಮಾರುಕಟ್ಟೆಯಲ್ಲಿ ನಡೆದಿದ್ದು, ಸಮಿದೋರಿ ಚಹಾ ಎಲೆಯನ್ನು ಹೋಲ್ಸೇಲ್ ವ್ಯಾಪಾರಿಯೊಬ್ಬರು ಕೆಜಿಗೆ 11.65 ಲಕ್ಷ ರೂ.ನಂತೆ ಖರೀದಿಸಿದ್ದಾರೆ.
ಈ ಎಲೆಯನ್ನು ಗ್ರೀನ್ ಟೀ ಮಾಡುವುದಕ್ಕೆ ಬಳಕೆ ಮಾಡಲಾಗುತ್ತದೆ. ಈ ಹಿಂದೆ ಜಪಾನ್ನಲ್ಲಿ ಸಮಿದೋರಿ ಚಹಾ ಎಲೆ ಕೆಜಿಗೆ 6.42 ಲಕ್ಷ ರೂ.ನಂತೆ ಮಾರಾಟವಾಗಿ ದಾಖಲೆ ಬರೆದಿತ್ತು.
ಫೋರ್ಬ್ಸ್ ಸಂಸ್ಥೆಯ ವರದಿಯ ಪ್ರಕಾರ 2020ರಲ್ಲಿ ಈ ಸಮಿದೋರಿ ಚಹಾ ಎಲೆಯ ಎರಡು ಚಮಚ ಪುಡಿ ಹಾಕಿ ಮಾಡುವ ಒಂದು ಕಪ್ ಚಹಾಕ್ಕೆ ಬರೋಬ್ಬರಿ 2300 ರೂ. ಬೆಲೆಯಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!