ಮಗು ಅಳು ನಿಲ್ಲಿಸಲು ಮನೆಯಲ್ಲಿ ತಾಯಿಯ ಕಟೌಟ್‌! ; ಜಪಾನ್‌ ದಂಪತಿಯ ಕಿಲಾಡಿ ಐಡಿಯಾ

Team Udayavani, Dec 15, 2019, 7:37 PM IST

ಟೋಕಿಯೋ: ತಾಯಿ ಕಾಣದಾದ ತತ್‌ಕ್ಷಣ ಮಗು ಅಳಲು ಶುರುಮಾಡುತ್ತದೆ. ಒಂದು ನಿಮಿಷವೂ ಬಿಟ್ಟಿರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ತಾಯಿಗೆ ಏನು ಮಾಡಲೂ ಸಾಧ್ಯವಾಗುವುದಿಲ್ಲ. ಸದಾ ತಾಯಿಯನ್ನು ಬಯಸುವ ಮಗುವಿಗೆ ಆ ತಾಯಿ ಮಾಡಿದ್ದು ಅತಿ ವಿಶಿಷ್ಟ ಮತ್ತು ವಿಚಿತ್ರವಾಗಿದೆ. ಇದರಿಂದ ಮಗು ಅಳು ನಿಂತಿದೆ.

ಇಂಥದ್ದೊಂದು ಐಡಿಯಾವನ್ನು ಮಾಡಿದ್ದು ಜಪಾನ್‌ನಲ್ಲಿ ಮಗುವಿನ ಅಳು ನಿಲ್ಲಿಸಲು ತಾವು ಮಾಡಿದ ಐಡಿಯಾವನ್ನು ಮಗುವಿನ ತಂದೆ ಶೇರ್‌ ಮಾಡಿದ್ದು ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ಆ ಪ್ರಕಾರ ಮಗುವಿಗೆ ಕಾಣುವಂತೆ ದೊಡ್ಡದಾಗಿ ಕಟೌಟ್‌ ಮಾಡಿ ಮನೆಯಲ್ಲಿ ನಿಲ್ಲಿಸಲಾಗಿದೆ. ಎರಡು ಕಟೌಟ್‌ಗಳಿದ್ದು ಅದನ್ನು ಬೇಕಾದ ಕಡೆಗಳಲ್ಲಿ ಇಡಲಾಗುತ್ತದೆ. ಮಗು ಮನೆಯ ಹಾಲ್‌, ಕೋಣೆಯಲ್ಲಿ ಆಟವಾಡಿಕೊಂಡೇ ಇರುತ್ತದೆ. ತಾಯಿ ನೆನಪಾದಾಗ ಕಟೌಟ್‌ ನೋಡುವುದರಿಂದ ಅಳುವುದೇ ಇಲ್ಲ.

ಇದನ್ನು ಮಗುವಿನ ತಂದೆ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು ವೈರಲ್‌ ಆಗಿದೆ. 14 ಸಾವಿರ ರಿ ಟ್ವೀಟ್‌ ಆಗಿದ್ದು, 44 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಮಂದಿ ಮಗು ಚಲನವಲನ, ಕಟೌಟ್‌ ಇರುವುದರಿಂದ ಮಗು ಅಳದೇ ಇರುವ ವೀಡಿಯೋವನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ