ಜಪಾನ್ ಮಾಜಿ ಪ್ರಧಾನಿ 101 ವರ್ಷದ ಯಸುಹಿರೊ ನಿಧನ
Team Udayavani, Nov 29, 2019, 9:17 PM IST
ಟೋಕಿಯೋ: ಅಮೆರಿಕದ ಜೊತೆಗೆ ಜಪಾನ್ ಸಂಬಂಧ ವೃದ್ಧಿಸಲು ಭಾರೀ ಕೊಡುಗೆ ನೀಡಿದ್ದ, ಜಪಾನಿನ ಮಾಜಿ ಪ್ರಧಾನಿ ಯಸುಹಿರೊ ನಕಾಸೊನೆ 101ನೇ ವರ್ಷದಲ್ಲಿ ನಿಧನ ಹೊಂದಿದ್ದಾರೆ. ಅವರು 1982ರಿಂದ 1987ರವರೆಗೆ ಪ್ರಧಾನಿಯಾಗಿದ್ದರು.
ಒಂದು ಕಾಲದಲ್ಲಿ ಅಮೆರಿಕವನ್ನು ಜಪಾನ್ ಶತ್ರುರಾಷ್ಟ್ರವೆಂಬಂತೆ ನೋಡುತ್ತಿತ್ತು. ಈ ವೇಳೆ ಅಧಿಕಾರಕ್ಕೇರಿದ್ದ ನಕಾಸೊನೆ, ಅಮೆರಿಕವನ್ನು ಜಪಾನಿನ ಅತ್ಯಾಪ್ತ ದೇಶ ಎಂದು ಘೋಷಣೆ ಮಾಡಿದರು. ಆ ದೇಶದೊಂದಿಗೆ ಭದ್ರತಾ ಒಪ್ಪಂದ ಮಾಡಿಕೊಂಡರು. ವ್ಯಾಪಾರಿ ಸಂಬಂಧ ವೃದ್ಧಿಸಲು ನೆರವಾಗಿದ್ದರು.