ಜಿನ್ನಾ ಹೌಸ್ ನಮ್ಮದು: ಪಾಕ್ನಿಂದ ಹೊಸ ತಗಾದೆ
Team Udayavani, Dec 21, 2018, 6:15 AM IST
ಇಸ್ಲಾಮಾಬಾದ್: ಮುಂಬೈನಲ್ಲಿರುವ ಜಿನ್ನಾ ಹೌಸ್ ಪಾಕಿಸ್ತಾನಕ್ಕೆ ಸೇರಿದ್ದಾಗಿದ್ದು, ಭಾರತ ಸರಕಾರ ಅದನ್ನು ತನ್ನ ಸುಪ ರ್ದಿಗೆ ತೆಗೆದುಕೊಳ್ಳಲು ಮಾಡುವ ಯಾವುದೇ ಪ್ರಯತ್ನಗಳನ್ನು ತಾನು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಜಿನ್ನಾ ಹೌಸ್ನ ಮಾಲೀಕತ್ವವನ್ನು ವಿದೇಶಾಂಗ ಇಲಾಖೆ ವಹಿಸಿಕೊಳ್ಳಲಿರುವ ಬಗ್ಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪಾಕಿ ಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್,”ಜಿನ್ನಾ ಹೌಸ್ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಈ ಹಿಂದೆ ಭಾರತವೇ ಹೇಳಿತ್ತು. ಅದರ ದಾಖಲೆಗಳು ನಮ್ಮ ಬಳಿ ಇವೆ” ಎಂದಿದ್ದಾರೆ.
ಜಿನ್ನಾ ಹೌಸ್ ಪಾಕಿಸ್ತಾನಕ್ಕೆ ಸಿಕ್ಕರೆ ಕರ್ತಾರ್ಪುರ ಭೂಭಾಗ ವನ್ನು ಭಾರತಕ್ಕೆ ಹಸ್ತಾಂತರಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,”ಅದು ಸಾಧ್ಯವಿಲ್ಲ. ಕರ್ತಾರ್ಪುರ ಕಾರಿಡಾರ್ ಯೋಜನೆ ಉಭಯ ದೇಶಗಳ ಜಂಟಿ ಯೋಜನೆಯಾಗಿದ್ದು ಅದಕ್ಕೆ ಜಿನ್ನಾ ಹೌಸ್ ಪ್ರಕರಣ ಥಳುಕು ಹಾಕುವ ಪ್ರಮೇಯವಿಲ್ಲ” ಎಂದಿದ್ದಾರೆ. ಪಾಕಿಸ್ತಾನದ ವಾದವನ್ನು ತಳ್ಳಿಹಾಕಿರುವ ಭಾರತ, ಜಿನ್ನಾ ಹೌಸ್ ಕಾನೂನಾತ್ಮಕವಾಗಿ ಭಾರತಕ್ಕೇ ಸೇರುತ್ತದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ