ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪದಗ್ರಹಣ: ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್
Team Udayavani, Jan 20, 2021, 10:28 PM IST
ವಾಷಿಂಗ್ಟನ್ ಡಿಸಿ : ಅಮೆರಿಕಾದ 46 ನೇ ಅಧ್ಯಕ್ಷರಾಗಿ ಡೆಮಾಕ್ರಾಟ್ ಪಕ್ಷದ ನಾಯಕ ಜೋ ಬೈಡೆನ್ ಕ್ಯಾಪಿಟಲ್ ಬಿಲ್ಡಿಂಗ್ ನ ವೆಸ್ಟ್ ಫ್ರಂಟ್ ನಲ್ಲಿ ಬುಧವಾರ (ಜ.20 ) ಪ್ರಮಾಣ ವಚನ ಸ್ವೀಕರಿಸಿದರು.ಇದರೊಂದಿಗೆ ಅಮೆರಿಕಾದ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಕೂಡ ಪದಗ್ರಹಣ ಮಾಡಿದರು.
ಜೋ ಬೈಡೆನ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರತಿಜ್ಞಾವಿಧಿ ಬೋಧಿಸಿದರು. ಈ ಮೂಲಕ ಅಮೆರಿಕಾದಲ್ಲಿ ಜೋ ಬೈಡೆನ್ ಯುಗ ಅಧಿಕೃತವಾಗಿ ಆರಂಭವಾಗಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಭಾರತದ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಅಮೆರಿಕಾದ ಉಪಾಧ್ಯಕ್ಷರಾದ ಭಾರತದ ಮೊದಲ ಸಂಜಾತ ಮಹಿಳೆ ಎನ್ನುವ ಹೆಗ್ಗಳಿಕೆಗೆ ಕಮಲಾ ಹ್ಯಾರಿಸ್ ಪಾತ್ರರಾದರು.
ಈ ವೇಳೆ ನಿರ್ಗಮಿತ ಅಧ್ಯಕ್ಷ ಡಿನಾಲ್ಡ್ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಪ್ರದಾಯವನ್ನು ಮುರಿದರು.