ಪತ್ರಕರ್ತನಿಗೆ 1 ಗಂಟೆ ಜೈಲು!

Team Udayavani, Nov 20, 2019, 6:47 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಠ್ಮಂಡು: ನೇಪಾಳದ ಕಠ್ಮಂಡುವಿನ ನ್ಯಾಯಾಲಯವೊಂದು ಪತ್ರಕರ್ತರೊಬ್ಬರಿಗೆ 1 ಗಂಟೆಯ ಜೈಲು ಶಿಕ್ಷೆ ಮತ್ತು 1 ರೂಪಾಯಿ ದಂಡ ವಿಧಿಸಿದೆ! ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣವನ್ನು ವೈಭವೀಕರಿಸಿ ಬರೆದಿದ್ದಲ್ಲದೆ, ಘಟನೆ ಬಗ್ಗೆ ತಿರುಚಿರುವ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ಕೋರ್ಟ್‌ ತೀರ್ಪು ಪ್ರಕಟವಾದ ಬೆನ್ನಲ್ಲೇ ಪತ್ರಕರ್ತನನ್ನು ಬಂಧಿಸಿದ ಪೊಲೀಸರು, 1 ಗಂಟೆ ಬಿಟ್ಟು ಬಿಡುಗಡೆ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ