ಪಾರ್ಕಲ್ಲಿ ಸೆಕ್ಸ್‌ ಮಾಡಿದ್ದಕ್ಕೆ ಕ್ಲೀನಿಂಗ್‌ ಶಿಕ್ಷೆ ಕೊಟ್ಟ ಜಡ್ಜ್

Team Udayavani, May 7, 2017, 3:45 AM IST

ಓಹಿಯೋ: ಅಮೆರಿಕದಲ್ಲಿ ಹೇಳಿ ಕೇಳಿ ಸ್ವತ್ಛಂದ ಕಾಮವಿದೆ. ಅದು ಅಲ್ಲಿನ ವ್ಯವಸ್ಥೆ ಬಿಡಿ. ಆದರೂ ಕೆಲವೊಮ್ಮೆ ನ್ಯಾಯಾಲಯಗಳಿಗೆ ಈ ಬಗ್ಗೆ ದೂರುಗಳೂ ಕೂಡ ಕೊಡಲ್ಪಡುತ್ತವೆ. ಅಂಥದ್ದೇ ಒಂದು ಪ್ರಕರಣದ ಓಹಿಯೋದಲ್ಲಿ ನಡೆದಿದೆ. 

ಅದಕ್ಕೆ ಸ್ಥಳೀಯ ಕೋರ್ಟೊಂದರ ನ್ಯಾಯಾಧೀಶ ಮೈಕೆಲ್‌ ಸಿಸೊನೆಟ್ಟಿ ನೀಡಿದ ಶಿಕ್ಷೆ ಮಾತ್ರ ವಿಚಿತ್ರದ್ದು ಮತ್ತು ವಿಶೇಷದ್ದು. ಯುವ ಜೋಡಿಯೊಂದು ಸಾರ್ವಜನಿಕ ಉದ್ಯಾನದಲ್ಲಿ ಪರಿವೆಯೇ ಇಲ್ಲದಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿತ್ತು. ಅದನ್ನು ನೋಡಿ ಮುಜುಗರಪಟ್ಟ ಯಾರೋ ದೂರು ನೀಡಿದರು. ವಿಚಾರಣೆ ನಡಿಯಿತು. ಜೋಡಿಗೆ ನೀಡಿದ ಶಿಕ್ಷೆ ಏನು ಗೊತೇ? ಉದ್ಯಾನದಲ್ಲಿನ ಕಾಂಡೋಮ್‌, ಕಸ ಕಡ್ಡಿಗಳನ್ನು ಹೆಕ್ಕಿ ಶುಚಿ ಮಾಡುವುದು. ಜತೆಗೆ ಪತ್ರಿಕೆ ಯೊಂದರಲ್ಲಿ ಕ್ಷಮೆ ಕೇಳುವ ಜಾಹೀರಾತು ಹಾಕಲೂ ಸೂಚಿಸಿದರು. ವಿನೂತನ ತೀರ್ಪು ನೀಡುವ ಶೈಲಿಯಿಂದಾಗಿ 1994ರಿಂದಲೂ ಜಡ್ಜ್ ಆಗಿ ಮರು ಆಯ್ಕೆಗೊಳ್ಳುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ