ಅಫ್ಗಾನಿಸ್ತಾನದಿಂದ ಅಮೆರಿಕನ್ನರನ್ನು ಕರೆಸಿಕೊಳ್ಳುವ ಕಾರ್ಯಕ್ಕೆ ಚುರುಕು ನೀಡುತ್ತೇವೆ:ಬೈಡನ್‌


Team Udayavani, Aug 23, 2021, 3:37 PM IST

kabul airlift is-accelerating : American President  joebiden

ವಾಷಿಂಗ್ಟನ್ : ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ನಂತರ ಅಲ್ಲಿನ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಫ್ಗಾನಿಸ್ತಾನದಲ್ಲಿ ಉದ್ಯೋಗ ನಿಮಿತ್ತ ವಿದೇಶಗಳಿಂದ ಬಂದು ವಾಸ್ತವ್ಯ ಹೂಡಿದವರ ಸ್ಥಿತಿಯಂತೂ ಹೇಳತೀರದು.

ವಿಶ್ವದ ದೊಡ್ಡಣ್ಣ ಅಮೆರಿಕಾದ ಮೂಲ ವಾಸಿಗಳು ಕೂಡ ತಾಲಿಬಾನ್ ಉಗ್ರರ ಉಪಟಳವನ್ನು ಎದುರಿಸುತ್ತಿದ್ದು, ಹಲವಾರು ಮಂದಿ ಅಮೆರಿಕನ್ನರು ಈಗಾಗಲೇ ಅಮೆರಿಕಾ ಸರ್ಕಾರಕ್ಕೆ ರಕ್ಷಣೆ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್‌ ಪ್ರತಿಕ್ರಿಯಿಸಿದ್ದು, ‘ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ ನಿಂದ ಅಮೆರಿಕದ  ಮತ್ತು ಇತರ ಸಾವಿರಾರು ಜನರನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆಯು ಅತ್ಯಂತ ಕಠಿಣ ಹಾಗೂ ದುಃಖದಾಯಕವಾಗಿದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುತ್ತಿದ್ದೇವೆಂದು ಅವರು ಹೇಳಿದ್ದಾರೆ.

ಈ ಸ್ಥಳಾಂತರ ಪ್ರಕ್ರಿಯೆಯನ್ನು ಯಾವಾಗ ಆರಂಭಿಸಿದ್ದರೂ ಅಫ್ಗಾನಿಸ್ತಾನದಿಂದ ಜನರನ್ನು ಕರೆತರುವುದೇ ಇಷ್ಟೇ ಕಠಿಣ ಹಾಗೂ ದುಃಖ ನೀಡುತ್ತಿತ್ತು. ಇಂತಹ ದೃಶ್ಯಗಳು ಆಗಲೂ ದೂರದರ್ಶನದಲ್ಲಿ ನೋಡಲು ಸಿಗುತ್ತಿತ್ತು’ ಎಂದರು.

ಇದನ್ನೂ ಓದಿ : ಹೊಸ ಡಿಜಿಟಲೀಕರಣ ನೀತಿ ಹಾಗೂ ಆರ್ ಆ್ಯಂಡ್ ಡಿ ಪಾಲಿಸಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

‘ಆಗಸ್ಟ್‌ 31ರೊಳಗೆ ಸ್ಥಳಾಂತರ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಗಡುವನ್ನು ನಿಗದಿ ಮಾಡಲಾಗಿತ್ತು. ಆದರೆ, ಈ ಗಡುವನ್ನು ವಿಸ್ತರಿಸುವ ಕುರಿತಾಗಿ ಸೇನೆಯೊಂದಿಗೆ ಈಗಾಗಲೇ ಚರ್ಚಿಸಲಾಗುತ್ತಿದೆ. ಗಡುವನ್ನು ವಿಸ್ತರಿಸುವ ಪರಿಸ್ಥಿತಿ ಎದುರಾಗದಿರಲಿ ಎನ್ನುವುದೇ ನಮ್ಮ ಪ್ರಧಾನ ಆಶಯ ಎಂದಿದ್ದಾರೆ.

ಇನ್ನು, ಈ ಬಗ್ಗೆ ತಾಲಿಬಾನ್‌ ಸಂಘಟನೆಯೊಂದಿಗೂ ಕೂಡ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ’ಎಂದು ಅವರು ಹೇಳಿದರು.‘ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 3 ಗಂಟೆಗೆ ಕೊನೆಗೊಂಡಂತೆ 12 ಗಂಟೆಗಳ ಅವಧಿಯಲ್ಲಿ ಅಮೆರಿಕ ಸೇನೆಯ ಏಳು C-17 ಮತ್ತು ಒಂದು C-130 ವಿಮಾನಗಳ ಮೂಲಕ ಸುಮಾರು 1700 ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಮಿತ್ರಪಡೆಗಳ 39 ವಿಮಾನಗಳ ಮೂಲಕ 3,400 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಅಮೆರಿಕವು ಆಗಸ್ಟ್‌ 14ರಿಂದ ಈವರೆಗೆ 30,300 ಮಂದಿಯನ್ನು ಸ್ಥಳಾಂತರಿಸಿದೆ. ಭದ್ರತಾ ಮತ್ತು ರಾಜತಾಂತ್ರಿಕ ಸಮಸ್ಯೆಯಲ್ಲಿ ಉಂಟಾದ ಅಡಚಣೆಯಿಂದಾಗಿ ಸ್ಥಳಾಂತರ ‍ಪ್ರಕ್ರಿಯೆಯು ನಿಧಾನಗೊಂಡಿತ್ತು ಎಂದು ಅವರು ಮಾಹಿತಿ ನೀಡಿದರು.

ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಅಮೆರಿಕದ ಮಹಿಳೆಯೊಬ್ಬಳು ತಾಲಿಬಾನ್‌ ಅಟ್ಟಹಾಸಕ್ಕೆ ಹೆದರಿ ಅಮೆರಿಕಾದ ಸರ್ಕಾರದ ಸಹಾಯವನ್ನು ಯಾಚಿಸಿದ್ದಾಳೆಂದು ಅಲ್ಲಿನ ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾಗ ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲುತ್ತಿರುವ ದೃಶ್ಯವನ್ನು ಕಂಡು ಬೆದರಿದ ಮಹಿಳೆ ಬೈಡನ್ ಸರ್ಕಾರದ ಸಹಾಯವನನು ಕೇಳಿದ್ದು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಉಪಟಳವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮನ್ನು ರಕ್ಷಿಸಿ ಎಂದು ಕೇಳಿದ್ದಾಳೆ.

ಇನ್ನು, ಕಾಬೂಲ್ ವಿಮಾನ ನಿಲ್ದಾಣದ ಬಳಿ ಆಕೆಯ ಪಕ್ಕದಲ್ಲೇ ಇದ್ದ ಒಬ್ಬ ವ್ಯಕ್ತಿಯನ್ನು ತಾಲಿಬಾನ್‌ ಉಗ್ರರು ಹೆಡ್ ಶಾಟ್ ಮಾಡಿ ಸಾರ್ವಜನಿಕವಾಗಿ ಕೊಂದದ್ದನ್ನು ನೋಡಿ ಅಮೆರಿಕಾ ಮೂಲದ ಮಹಿಳೆ ಹೆದರಿದ್ದಾರೆ. ಅಮೆರಿಕಾ ಸರ್ಕಾರದ ರಕ್ಷಣೆಗೆ ಮೊರೆ ಹೋಗಿರುವುದು ತಾಲಿಬಾನ್ ಉಗ್ರರ ಹಿಂಸಾಚಾರ ತಾರಕಕ್ಕೇರಿದೆ ಎನ್ನುವುದಕ್ಕೆ ಇದೇ ಸಾಕ್ಷಿಎಂದು ವರದಿ ತಿಳಿಸಿತ್ತು.

ವೆಸ್ಟ್ ವರ್ಜೀನಿಯಾ ಪ್ರತಿನಿಧಿ ಕರೋಲ್ ಮಿಲ್ಲರ್ ಅವರ ಕಚೇರಿಗೆ ಕಳುಹಿಸಿದ ಆಡಿಯೋ ರೆಕಾರ್ಡಿಂಗ್‌ ನಲ್ಲಿ,  “ನನಗೆ ನನ್ನ ಕುಟುಂಬವನ್ನು, ನನ್ನ ಮಕ್ಕಳನ್ನು ಮತ್ತೆ ಕಾಣುತ್ತೇನೆ ಎನ್ನುವ ಭರವಸೆ ಇಲ್ಲ. ಜೀವ ಭಯ ಬಿಟ್ಟು ಉಸಿರಾಡುತ್ತಿದ್ದೇನೆ. ತಾಲಿಬಾನ್ ಉಗ್ರರೇ ತುಂಬಿರುವ ವಾಹನಗಳು ರಸ್ತೆ ತುಂಬೆಲ್ಲಾ ಹಾದು ಹೋಗುತ್ತಿರುವಾಗ ಈ ಕ್ಷಣವೋ, ಮರು ಕ್ಷಣವೋ ನಮ್ಮನ್ನು ಸಾರ್ವಜನಿಕವಾಗಿ ಕೊಂದು ಹೋಗುತ್ತಾರೆ ಎಂಬ ಭಯವಾಗುತ್ತಿದೆ” ಎಂದು ಹೇಳಿರುವುದನ್ನು, ಕರೋಲ್ ಮಿಲ್ಲರ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ : ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಏಕೆ ಎನ್ನುವುದು ಈಗ ತಿಳಿಯುತ್ತಿದೆ: ಹರ್ದೀಪ್ ಸಿಂಗ್ ಪುರಿ

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.