ಲ್ಯೂಟೆನ್ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್ ಭೇಟಿ
Team Udayavani, Dec 7, 2022, 8:10 PM IST
ಲಂಡನ್: ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್ ಅವರು ಲಂಡನ್‌ನ ಲ್ಯೂಟನ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಬ್ರಿಟನ್ ರಾಜಮನೆತನ ಫೋಟೋ ಮತ್ತು ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದೆ. ಗುರುದ್ವಾರದಲ್ಲಿ ಇರುವ ಸಾಮೂಹಿಕ ಅಡುಗೆ ಮನೆ, ಅಲ್ಲಿ ಆಹಾರ ಸಿದ್ಧಪಡಿಸುವ ಕ್ರಮ, ಅಲ್ಲಿ ಇರುವ ಸ್ವಯಂಸೇವಕರು, ಮಕ್ಕಳ ಜತೆಗೆ ಮುಕ್ತವಾಗಿ ಬೆರೆತು ಮಾತನಾಡಿದ್ದಾರೆ.
ಕೊರೊನಾ ಅವಧಿಯಲ್ಲಿ ಗುರುದ್ವಾರ ವತಿಯಿಂದ ಆಹಾರ ವಿತರಿಸಿ, ಹಸಿವು ನೀಗಿಸಿದ ಶ್ರಮದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯು.ಕೆ.ಯಲ್ಲಿ ಸುಮಾರು 5 ಲಕ್ಷ ಮಂದಿ ಸಿಖ್ ಸಮುದಾಯದವರು ಇದ್ದಾರೆ.