ಮತ್ತಷ್ಟು ಅಣ್ವಸ್ತ್ರ ಪರೀಕ್ಷೆಗೆ ಉ.ಕೊರಿಯಾ ಸಿದ್ಧತೆ
Team Udayavani, Sep 5, 2017, 7:45 AM IST
ಸಿಯೋಲ್: ಕೆಲ ದಿನಗಳಿಂದ ತಣ್ಣಗಾದಂತೆ ಕಂಡ ಅಮೆರಿಕ-ಉತ್ತರ ಕೊರಿಯಾ ನಡುವಿನ ಯುದ್ಧದ ಕಿಡಿ ಮತ್ತೆ ಹೊಗೆಯಾಡುತ್ತಿದೆ. ಭಾನುವಾರ ನಡೆದ ತನ್ನ ಆರನೇ ಮತ್ತು ಈವರೆಗಿನ ಅತ್ಯಂತ ಶಕ್ತಿಶಾಲಿ ಅಣ್ವಸ್ತ್ರ ಪರೀಕ್ಷೆಯ ಪರಿಪೂರ್ಣ ಯಶಸ್ಸಿನಿಂದ ಉನ್ಮಾದಗೊಂಡಿರುವ ಉತ್ತರ ಕೊರಿಯಾ, ಮತ್ತಷ್ಟು ಅಣ್ವಸ್ತ್ರ ಪರೀಕ್ಷೆಗಳಿಗೆ ಸಿದ್ಧವಾಗಿದೆ.
ಪಾಂಗ್ಯಾಂಗ್ನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ, “ಭಾನುವಾರದ ತನ್ನ ಅತಿ ದೊಡ್ಡ ಯಶಸ್ಸಿನ ಗುಂಗಿನಲ್ಲಿರುವ ಉತ್ತರ ಕೊರಿಯಾ ಇನ್ನೂ ಹಲವು ಖಂಡಾಂತರ ಕ್ಷಿಪಣಿ ಪ್ರಯೋಗದ ತಯಾರಿಯಲ್ಲಿದೆ’ ಎಂಬ ಮಾಹಿತಿಯನ್ನು ಅಮೆರಿಕಕ್ಕೆ ರವಾನಿಸಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಕೊರಿಯಾ ಪರ್ಯಾಯ ದ್ವೀಪದಲ್ಲಿ ವಿಮಾನವಾಹಕ ನೌಕೆಗಳು ಮತ್ತು ಸ್ಟ್ರಾಟಜಿಕ್ ಬಾಂಬರ್ಗಳನ್ನು ನಿಯೋಜಿಸುವ ಕುರಿತು ವೈಟ್ಹೌಸ್ ಜತೆ ಚರ್ಚಿಸಿರುವುದಾಗಿ ಹೇಳಿದೆ.
ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ಮಹತ್ವದ ಸಭೆ ನಡೆಸಿದೆ. ಜತೆಗೆ, ತಕ್ಷಣಕ್ಕೆ ಲಭ್ಯವಿರುವ ಮಿಲಿಟರಿ ಆಯ್ಕೆಗಳ ಕುರಿತು ಮಾಹಿತಿ ನೀಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆ.
ಬಾಂಬ್ ಗಾತ್ರ 50 ಕಿಲೋ ಟನ್!
ಉತ್ತರ ಕೊರಿಯಾ ಭಾನುವಾರ ನಡೆಸಿದ ಅಣ್ವಸ್ತ್ರ ಪರೀಕ್ಷೆಯಲ್ಲಿ ಬಳಸಲಾದ ಬಾಂಬ್ನ ಗಾತ್ರ ಸುಮಾರು 50 ಕಿಲೋಟನ್ ಎಂದು ದ.ಕೊರಿಯಾ ಅಂದಾಜಿಸಿದೆ! ಗಾತ್ರದಲ್ಲಿ ಈ ಬಾಂಬ್ ಕಳೆದ ವರ್ಷ ಸೆಪ್ಟಂಬರ್ನಲ್ಲಿ ಉ.ಕೊರಿಯಾ ಪ್ರಯೋಗಕ್ಕೆ ಬಳಸಿದ ಬಾಂಬ್ಗಿಂತಲೂ ಐದು ಪಟ್ಟು ದೊಡ್ಡದು ಮತ್ತು 1945ರಲ್ಲಿ ಅಮೆರಿಕ, ಹಿರೋಶಿಮಾ ಮೇಲೆ ಸಿಡಿಸಿದ ಅಣು ಬಾಂಬ್ಗಿಂತ 3 ಪಟ್ಟು ದೊಡ್ಡದಾಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ