ಕುಲಭೂಷಣ್‌ ಜಾಧವ್‌ ವಿಚಾರಣೆಯೇ ಅಕ್ರಮ


Team Udayavani, Feb 19, 2019, 12:30 AM IST

q-27.jpg

ಹೇಗ್‌: ಭಾರತೀಯ ಕುಲಭೂಷಣ್‌ ಜಾಧವ್‌ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪ್ರಕ್ರಿಯೆ ಅಸಮರ್ಪಕವಾಗಿದ್ದು, ಈ ವಿಚಾರಣೆಯನ್ನು ಅಕ್ರಮ ಎಂದು ಘೋಷಿಸಬೇಕು ಎಂಬುದಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಭಾರತ ವಾದ ಮಂಡಿಸಿದೆ. ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 4 ದಿನಗಳ ವಿಚಾರಣೆ ಸೋಮವಾರ ದಿ ಹೇಗ್‌ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಆರಂಭವಾಗಿದ್ದು, ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯವು ಜಾಧವ್‌ರನ್ನು ಗಲ್ಲಿಗೇರಿಸುವಂತೆ ಆದೇಶ ನೀಡಿರುವುದು ಅಕ್ರಮ ಎಂದು ಭಾರತ ವಾದಿಸಿದೆ.

ಮೊದಲ ದಿನದ ವಿಚಾರಣೆಯಲ್ಲಿ ಭಾರತವು ಎರಡು ಪ್ರಮುಖ ಅಂಶಗಳ ಮೇಲೆ ಗಮನ ಹರಿಸಿದೆ. ವಿಯೆನ್ನಾ ಸಮ್ಮೇಳನದಲ್ಲಿ ಮಾಡಿಕೊಂಡ ಒಪ್ಪಂದವನ್ನು ಪಾಕಿಸ್ಥಾನ ಉಲ್ಲಂಘಿಸಿ, ಜಾಧವ್‌ಗೆ ರಾಯಭಾರ ಸಂಪರ್ಕಕ್ಕೆ ಅವಕಾಶ ನೀಡಿಲ್ಲ ಹಾಗೂ ವಿಚಾರಣೆಯ ಪ್ರಕ್ರಿಯೆ ಅಕ್ರಮವಾಗಿದೆ ಎಂದು ವಾದ ಮಂಡಿಸಿದೆ. ಭಾರತದ ಪರ ಮಾಜಿ ಸಾಲಿಸಿಟರ್‌ ಜನರಲ್‌ ಹರೀಶ್‌ ಸಾಳ್ವೆ ವಾದ ಮಂಡಿಸಿದ್ದು, ಅಮಾಯಕ ಭಾರತೀಯ ವ್ಯಕ್ತಿಯ ಜೀವದ ಜೊತೆ ಆಟವಾಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಇಂದು ಪಾಕ್‌ ವಾದ: ಮಂಗಳವಾರ ಪಾಕಿಸ್ಥಾನ ವಾದ ಮಂಡಿಸಲಿದ್ದು, ಭಾರತದ ಆರೋಪಗಳಿಗೆ ಪ್ರತಿಕ್ರಿಯಿಸಲಿದೆ. ಭಾರತದ ಗೂಢಚಾರ ಎಂದು ನೆವ ಹೇಳಿದ ಪಾಕಿಸ್ಥಾನ 2017ರ ಏಪ್ರಿಲ್‌ನಲ್ಲಿ ಇರಾನ್‌ನಿಂದ ಕರೆತಂದು ಬಲೂಚಿಸ್ತಾನದಲ್ಲಿ ಜಾಧವ್‌ರನ್ನು ಬಂಧಿಸಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಾಧವ್‌ಗೆ ತನ್ನ ಪರ ವಕೀಲರನ್ನು ನೇಮಿಸಿಕೊಳ್ಳಲೂ ಪಾಕಿಸ್ಥಾನ ಅವಕಾಶ ಮಾಡಿಕೊಟ್ಟಿಲ್ಲ. ವಿಯೆನ್ನಾ ಶೃಂಗದಲ್ಲಿ ಸಹಿ ಹಾಕಿದ ನಿಲುವಳಿ ಪ್ರಕಾರ ಯಾವುದೇ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉಭಯ ದೇಶಗಳ ವ್ಯಕ್ತಿಗೆ ವಕೀಲರನ್ನು ನೇಮಿಸಿಕೊಳ್ಳುವ ಅವಕಾಶ ಮತ್ತು ರಾಯಭಾರಿಯನ್ನು ಭೇಟಿ ಮಾಡುವ ಅವಕಾಶವನ್ನು ನೀಡಬೇಕು. ಆದರೆ ಪಾಕಿಸ್ಥಾನ ಇದಕ್ಕೆ ಆರಂಭದ ದಿನದಿಂದಲೂ ನಿರಾಕರಿಸಿದೆ. ಹೀಗಾಗಿ ಜಾಧವ್‌ಗೆ ಏನಾಗಿದೆ ಎಂಬುದು ನಮಗೆ ತಿಳಿದುಬರುತ್ತಿಲ್ಲ ಎಂದು ಸಾಳ್ವೆ ವಾದಿಸಿದ್ದಾರೆ.

ಹಸ್ತ ಲಾಘವ ಮಾಡೆವು!
ಕೋರ್ಟ್‌ನಲ್ಲಿ ವಿಚಾರಣೆಗೂ ಮುನ್ನ ಪಾಕಿಸ್ಥಾನ ಹಾಗೂ ಭಾರತದ ಅಧಿಕಾರಿಗಳು ಮುಖಾಮು ಖೀಯಾಗಿದ್ದರು. ಈ ವೇಳೆ ಪಾಕಿಸ್ಥಾನಕ್ಕೆ ಭಾರತೀಯ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಪಾಕಿಸ್ಥಾನದ ಅಟಾರ್ನಿ ಜನರಲ್‌ ಅನ್ವರ್‌ ಮನ್ಸೂರ್‌ ಖಾನ್‌ ಹಸ್ತಲಾಘವಕ್ಕೆಂದು ಮುಂದೆ ಬಂದಾಗ, ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್‌ ಮಿತ್ತಲ್‌ ಹಸ್ತಲಾಘವ ಮಾಡದೇ ಕೈಮುಗಿದಿದ್ದಾರೆ.

ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಭಾರತದ ವಾದವೇನು?
ಪಾಕಿಸ್ಥಾನದ ಪ್ರಕರಣವು ಕೇವಲ ಕಲ್ಪನೆಗಳ ಆಧಾರದಲ್ಲಿದೆ. ಯಾವುದೇ ಸಾಕ್ಷ್ಯವಿಲ್ಲ.
ಭಯೋತ್ಪಾದನೆಯಲ್ಲಿ ಜಾಧವ್‌ ಭಾಗವಹಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯವನ್ನು ಪಾಕಿಸ್ಥಾನ ನೀಡಿಲ್ಲ.
ಈ ಪ್ರಕರಣವನ್ನು ಪಾಕಿಸ್ಥಾನ ಭಾರತದ ವಿರುದ್ಧದ ಸಾಧನವನ್ನಾಗಿ ಬಳಸುತ್ತಿದೆ.
ತಕ್ಷಣವೇ ಜಾಧವ್‌ಗೆ ರಾಯಭಾರ ಸಂಪರ್ಕ ಒದಗಿಸಬೇಕು.
ಸಮ್ಮತಿ ಹೇಳಿಕೆಯನ್ನು ದಾಖಲೆಯನ್ನಾಗಿ ನೀಡಿದೆ. ಇದು ದುರುದ್ದೇಶಪೂರ್ವಕ.
ವಿಯೆನ್ನಾ ಸಮ್ಮೇಳನದ ನಿಲುವಳಿಗೆ ಪಾಕ್‌ ಅಗೌರವ ತೋರಿದೆ.
ಜಾಧವ್‌ಗೆ ರಾಯಭಾರ ಸಂಪರ್ಕ ಒದಗಿಸುವಂತೆ 13 ಬಾರಿ ವಿನಂತಿ ಮಾಡಿದ್ದರೂ ನಿರ್ಲಕ್ಷಿಸಲಾಗಿದೆ.
ಸಾಮಾನ್ಯ ನಾಗರಿಕನನ್ನು ಪಾಕ್‌ ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದು ತಪ್ಪು.
ಸೇನಾ ನ್ಯಾಯಾಲಯದಲ್ಲಿನ ಬಹುತೇಕ ಪ್ರಕರಣಗಳಲ್ಲಿ ಆರೋಪಿ ತಪ್ಪೊಪ್ಪಿಗೆ ನೀಡಲಾಗಿದ್ದು, ಇದು ವಿಚಾರಣೆ ಪ್ರಕ್ರಿಯೆಯ ಮೇಲೆ ಅನುಮಾನ ಮೂಡಿಸಿದೆ.

ಟಾಪ್ ನ್ಯೂಸ್

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.