ಕಾಶ್ಮೀರ ಮುಖಭಂಗ ಒಪ್ಪಿಕೊಂಡ ಪಾಕ್‌ ; ಜಾಗತಿಕ ಸಮುದಾಯದ ಪ್ರತಿಕ್ರಿಯೆ ಬಗ್ಗೆ ವಿವರಣೆ

Team Udayavani, Jan 18, 2020, 8:43 AM IST

ಬೋನ್‌ (ಜರ್ಮನಿ): ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾವಿಸಿ ಪ್ರತಿ ಬಾರಿಯೂ ಮುಖಭಂಗ ಅನುಭವಿಸಿರುವ ಪಾಕಿಸ್ಥಾನ, ಈಗ ತನಗಾದ ಅವಮಾನವನ್ನು ಒಪ್ಪಿಕೊಂಡಿದೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕಾಶ್ಮೀರ ವಿಚಾರವನ್ನು ಬೆಂಬಲಿಸುವವರೇ ಇಲ್ಲ ಎಂದು ಸ್ವತಃ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರೇ ಹೇಳಿದ್ದಾರೆ.

ಜರ್ಮನಿಯ ಸರಕಾರಿ ಸ್ವಾಮ್ಯದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ‘ಕಾಶ್ಮೀರದ ಸಮಸ್ಯೆಯನ್ನು ಯಾರೂ ಓಗೊಡಲೇ ಇಲ್ಲ. ಏಕೆಂದರೆ, ಪಾಶ್ಚಿ ಮಾತ್ಯ ರಾಷ್ಟ್ರಗಳಿಗೆ ತಮ್ಮ ವಾಣಿಜ್ಯ ಹಿತಾಸಕ್ತಿಯೇ ಮುಖ್ಯವಾಗಿದೆ. ಭಾರತವು ದೊಡ್ಡ ಮಾರುಕಟ್ಟೆಯಾಗಿರುವ ಕಾರಣ, ಯಾರೂ ಆ ದೇಶದ ವಿರುದ್ಧ ಸೊಲ್ಲೆತ್ತುತ್ತಿಲ್ಲ’ ಎಂದೂ ಖಾನ್‌ ಹೇಳಿದ್ದಾರೆ.

ಇನ್ನೊಂದೆಡೆ, ಕಾಶ್ಮೀರ ವಿವಾದವು ನ್ಯಾಯಯುತವಾಗಿ ಇತ್ಯರ್ಥವಾಗುವವರೆಗೂ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸುವುದಿಲ್ಲ ಎಂದು ಪಾಕ್‌ ವಿದೇಶಾಂಗ ಸಚಿವೆ ಶಾ ಮೆಹ್ಮೂದ್‌ ಖುರೇಷಿ ಶುಕ್ರವಾರ ಹೇಳಿದ್ದಾರೆ.

ನಾಲ್ವರ ಬಿಡುಗಡೆ: 370ನೇ ವಿಧಿ ರದ್ದು ಬಳಿಕ 5 ತಿಂಗಳ ಕಾಲ ಗೃಹ ಬಂಧನದಲ್ಲಿದ್ದ ನಾಲ್ವರು ರಾಜ ಕಾರಣಿಗಳನ್ನು ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಆಡಳಿತ ಬಿಡುಗಡೆ ಮಾಡಿದೆ. ಎನ್‌ಸಿ, ಪಿಡಿಪಿ, ಪಿಸಿ ಮತ್ತು ಕಾಂಗ್ರೆಸ್‌ನ ತಲಾ ಒಬ್ಬರನ್ನು ಬಿಡುಗಡೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪರಮಾಣು ಕಳ್ಳಸಾಗಣೆ: ಐವರ ವಿರುದ್ಧ ದೋಷಾರೋಪ
ಕಳವು ಮತ್ತು ವಂಚನೆ ಮೂಲಕವೇ ಕ್ಷಿಪಣಿ ತಂತ್ರಜ್ಞಾನ ಪಡೆದುಕೊಂಡ ಪಾಕಿಸ್ಥಾನದ ಕಿಡಿಗೇಡಿತನ ಮತ್ತೂಮ್ಮೆ ಬಯಲಾಗಿದೆ. ಆ ದೇಶಕ್ಕಾಗಿ ಪರಮಾಣು ತಂತ್ರಜ್ಞಾನವನ್ನು ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ ಎಂದು ಅಮೆರಿಕ ಸರಕಾರ ತಿಳಿಸಿದೆ.

ಅವರೆಲ್ಲರೂ ರಾವಲ್ಪಿಂಡಿಯ ‘ಬ್ಯುಸಿನೆಸ್‌ ವರ್ಲ್ಡ್’ ಎಂಬ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದವರು ಎಂದು ಗೊತ್ತಾಗಿದೆ. ಬಂಧಿತರು ಅಮೆರಿಕದಲ್ಲಿ ಸಿದ್ಧಪಡಿಸಿದ ಪರಮಾಣು ಸರಕನ್ನು ವರ್ಷಗಳ ಕಾಲ ಪಾಕ್‌ಗೆ ಸಾಗಿಸುತ್ತಿದ್ದರು. ಈ ಮೂಲಕ ದೇಶದ ಭದ್ರತೆಗೆ ಅಪಾಯ ಉಂಟುಮಾಡಿದ್ದಾರೆ ಎಂದು ಸಹಾಯಕ ಅಟಾರ್ನಿ ಜನರಲ್‌ ಜಾನ್‌ ಡೆಮರ್ಸ್‌ ಹೇಳಿದ್ದಾರೆ.

2014ರ ಸೆಪ್ಟಂಬರ್‌ನಿಂದ 2019ರ ಅಕ್ಟೋಬರ್‌ವರೆಗೆ ಐವರು ಕಾನೂನು ಬಾಹಿರವಾಗಿ ಪರಮಾಣು ಸರಕುಗಳನ್ನು ಪಾಕ್‌ಗೆ ಸಾಗಿಸುತ್ತಿದ್ದರು. ಆರೋಪಪಟ್ಟಿಯಲ್ಲಿ 29 ವಿವಿಧ ಕಂಪೆನಿಗಳಲ್ಲಿ ಈ ಐವರು ಕಾರ್ಯಾಚರಣೆ ನಡೆಸಿದ್ದರು ಎಂದು ಹೇಳಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ