ಕ್ರಿಸ್ತನ ಕುರಿತು ಗಾಂಧಿ ಬರೆದ ಪತ್ರ ಮಾರಾಟಕ್ಕೆ
Team Udayavani, Mar 2, 2018, 6:00 AM IST
ವಾಷಿಂಗ್ಟನ್: ಮಹಾತ್ಮ ಗಾಂಧಿ ಅವರು ಏಸು ಕ್ರಿಸ್ತನ ಕುರಿತು ಬರೆದಿದ್ದ ಭಾವನಾತ್ಮಕ ಪತ್ರವೊಂದು ಅಮೆರಿಕದಲ್ಲಿ 36.65 ಲಕ್ಷ ರೂ.ಗೆ ಮಾರಾಟಕ್ಕಿದೆ. ಗಾಂಧಿ ಈ ಪತ್ರವನ್ನು 1926ರ ಏ.6ರಲ್ಲಿ ಸಾಬರಮತಿ ಆಶ್ರಮದಿಂದ ಅಮೆರಿಕದ ಅಂದಿನ ಕ್ರೈಸ್ತ ಧಾರ್ಮಿಕ ಮುಖಂಡ ಮಿಲ್ಟನ್ ನ್ಯೂಬೆರ್ರಿ ಫ್ರಾಂಟ್ಸ್ಗೆ ಬರೆದಿದ್ದರು.
ಈ ಪತ್ರವನ್ನು ಪೆನ್ಸಿಲ್ವೇನಿಯಾದ ರಾಬ್ ಕಲೆಕ್ಷನ್ನಲ್ಲಿ ದಶಕಗಳ ಕಾಲ ಜತನವಾಗಿ ಇರಿಸಲಾಗಿತ್ತು. ಈಗ ಇದನ್ನು ಮಾರಾಟ ಮಾಡಲಾಗುತ್ತಿದೆ ಎಂದು ರಾಬ್ ಕಲೆಕ್ಷನ್ನ ಮುಖ್ಯಸ್ಥ ನಥಾನ್ ರಾಬ್ ಹೇಳಿದ್ದಾರೆ. ಏಸು ಕ್ರಿಸ್ತ ಮಾನವ ಜನಾಂಗದ ಅತ್ಯಂತ ಉತ್ತಮ ಬೋಧಕರಲ್ಲಿ ಒಬ್ಬರು. ಧಾರ್ಮಿಕ ಸಾಮ ರಸ್ಯ ಯಾಂತ್ರಿಕವಾಗಿ ಜನರ ಮೇಲೆ ಹೇರು ವುದರ ಮೂಲಕ ಸಾಧಿಸುವಂತಹದ್ದಲ್ಲ. ಒಂದು ಧರ್ಮಕ್ಕೆ ಸೇರಿದ ಜನರು ಮತ್ತೂಂದು ಧರ್ಮೀಯರನ್ನು ಗೌರವಿಸುವ ಮೂಲಕ ಸಾಧಿಸುವುದು ಎಂದು ಪತ್ರದಲ್ಲಿ ಹೇಳಿದ್ದಾರೆ. ಪತ್ರದ ಕುರಿತು ಮಾತನಾಡಿರುವ ನಥಾನ್, ಇದೊಂದು ಧಾರ್ಮಿಕ ಸಾಮರಸ್ಯ ಸಾರುವ ಭಾವನಾತ್ಮಕ ಪತ್ರ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ