ಝಾಕಿರ್ ನಾಯ್ಕ್ ಇನ್ನು ಮಲೇಷ್ಯಾದಲ್ಲೂ ಮಾತನಾಡುವಂತಿಲ್ಲ!
Team Udayavani, Aug 16, 2019, 9:30 PM IST
ವಿವಾದಿತ ಮುಸ್ಲಿಂ ಧರ್ಮಗುರು ಝಾಕಿರ್ ನಾಯ್ಕ್ ಗೆ ಮಲೇಷ್ಯಾದಲ್ಲೂ ಸಂಕಷ್ಟ ಎದುರಾಗಿದೆ. ಮಲೇಷ್ಯಾದಲ್ಲಿರುವ ಹಿಂದೂಗಳ ಕುರಿತಾಗಿ ಅವಹೆಳನಕಾರಿ ಹೇಳಿಕೆಯನ್ನು ನೀಡಿದ ಕಾರಣಕ್ಕಾಗಿ ಝಾಕಿರ್ ನಾಯ್ಕ್ ಅವರನ್ನು ಆಗಸ್ಟ್ 16 ಮತ್ತು 18ರಂದು ನಡೆಯಲಿರುವ ಇಸ್ಲಾಂ ಕಾರ್ಯಕ್ರಮವೊಂದರಲ್ಲಿ ಮಾತನಾಡದಂತೆ ಅಲ್ಲಿನ ಪೊಲೀಸರು ನಿಷೇಧ ವಿಧಿಸಿದ್ದಾರೆ.
ಕಳೆದ ವಾರ ಝಾಕಿರ್ ಮಾಡಿರುವ ಜನಾಂಗೀಯ ಹೆಳಿಕೆಯ ಸ್ಪಷ್ಟನೆಯನ್ನು ಬಯಸಿ ಅವರಿಗೆ ಸಮನ್ಸ್ ಕೂಡಾ ನೀಡಲಾಗುವುದು ಎಂದು ಮಲೇಷ್ಯಾ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ. ಆಗಸ್ಟ್ 8ರಂದು ಝಾಕಿರ್ ಮಾಡಿರುವ ಭಾಷಣದ ವಿಡಿಯೋ ಒಂದು ಇದೀಗ ಈ ವಿವಾದಿತ ಧರ್ಮಪ್ರಚಾರಕನಿಗೆ ಸಂಕಷ್ಟ ತಂದೊಡ್ಡಿದೆ. ಅದರಲ್ಲಿ ಝಾಕಿರ್ ಅವರು ‘ಮಲೇಷ್ಯಾದ ಹಿಂದೂಗಳು ಭಾರತದ ಪ್ರಧಾನ ಮಂತ್ರಿಗೆ ಹೆಚ್ಚು ನಿಷ್ಠರಾಗಿರುವಂತಿದೆ’ ಎಂದು ಹೆಳಿದ್ದರು.