ನಟ ಹೃತಿಕ್ ರನ್ನು ಇಷ್ಟಪಟ್ಟಿದ್ದಕ್ಕೆ ಪತ್ನಿಯನ್ನೇ ಕೊಂದ ಭೂಪ

Team Udayavani, Nov 12, 2019, 11:04 AM IST

ನ್ಯೂಯಾರ್ಕ್: ಬಾಲಿವುಡ್ ನ ಹ್ಯಾಂಡ್ ಸಮ್ ಹೀರೋ ಹೃತಿಕ್ ರೋಷನ್ ರನ್ನು ಇಷ್ಟಪಡದವರು ಯಾರು ಹೇಳಿ. ಆದರೆ ಇಲ್ಲೊಬ್ಬ ಭೂಪ ತನ್ನ ಪತ್ನಿ ಹೃತಿಕ್ ರೋಷನ್ ರನ್ನು ಇಷ್ಟ ಪಡುತ್ತಾರೆ ಎಂಬ ಕಾರಣಕ್ಕೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ನಡೆದಿದೆ.

ದಿನೇಶ್ವರ್ ಬುದಿದಾಟ್ ಪತ್ನಿಯನ್ನು ಕೊಲೆಗೈದ ಆಸಾಮಿ. 27ರ ಹರೆಯದ ಡೊನ್ನೆ ಡೊಜೋಯ್ ಕೊಲೆಯಾದವರು. ಡೊನ್ನೆ ಡೊಜೋಯ್ ಅವರು ಜೆಮಿನಿ ಅಲ್ಟ್ರಾ ಲಾಂಜ್ ನಲ್ಲಿ ಬಾರ್ ಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ದಂಪತಿಗಳು ಈ ಮೊದಲು ಓಝೋನ್ ಪಾರ್ಕಿನ ಆಲ್ಬರ್ಟ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ಪತ್ನಿ ಡೊನ್ನೆ ಬೇರೆ ಕಡೆ ವಾಸ ಮಾಡುತ್ತಿದ್ದರು.

ಕಳೆದ ಶುಕ್ರವಾರ ಡೊನ್ನೆ ಅವರು ಪತಿ ದಿನೇಶ್ವರ್ ಜೊತೆ ಸಿನಿಮಾ ನೋಡುವ ಸಲುವಾಗಿ ಓಝೋನ್ ಪಾರ್ಕಿನ ಮನೆಗೆ ಹೋಗಿದ್ದರು. ಅಲ್ಲಿ ದಿನೇಶ್ವರ್ ಪತ್ಮಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.

ದಿನೇಶ್ವರ್ ಗೆ ತನ್ನ ಪತ್ನಿಯ ಕೆಲಸ ಇಷ್ಟವಿರಲಿಲ್ಲ. ಡೊನ್ನೆಯ ಸಂಪಾದನೆಯಿಂದ ಹೊಟ್ಟೆಕಿಚ್ಚು ಪಡುತ್ತಿದ್ದ ದಿನೇಶ್ವರ್ ಪತ್ನಿಗೆ ಆಗಾಗ ಹೊಡೆಯುತ್ತಿದ್ದ ಎನ್ನಲಾಗಿದೆ. ಇದರೊಂದಿಗೆ ಡೊನ್ನೆಗೆ ಬಾಲಿವುಡ್ ನಟ ಹೃತಿಕ್ ರೋಶನ್ ಎಂದರೆ ಅಚ್ಚುಮೆಚ್ಚು. ಇದೂ ಕೂಡಾ ದಿನೇಶ್ವರ್ ಗೆ ಹೊಟ್ಟೆಕಿಚ್ಚಾಗುವಂತೆ ಮಾಡುತಿತ್ತು ಎನ್ನಲಾಗಿದೆ.

ಈ ಎಲ್ಲಾ ಕಾರಣಕ್ಕೆ ಪತ್ನಿಯನ್ನು ಕೊಂದ ದಿನೇಶ್ವರ್ ಹೋವಾರ್ಡ್ ಬೀಚ್ ನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ