ಸ್ವೀಡನ್ ವಿಜ್ಞಾನಿ ಸ್ವಾಂಟೆ ಪಾಬೊಗೆ ನೊಬೆಲ್
ಮಾನವ ವಿಕಾಸ ಕುರಿತು ನಡೆಸಿದ ಅಧ್ಯಯನಕ್ಕೆ ಗೌರವ
Team Udayavani, Oct 4, 2022, 7:20 AM IST
ಸ್ಟಾಕ್ಹೋಮ್: ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ನಡೆಸಿದ ಮಾನವ ವಿಕಾಸದ ಕುರಿತ ಸಂಶೋಧನೆಗಳಿಗಾಗಿ ಅವರಿಗೆ ವೈದ್ಯಕೀಯ ವಿಭಾಗದಲ್ಲಿ 2022ನೇ ಸಾಲಿನ ನೊಬೆಲ್ ಪ್ರಶಸ್ತಿ ಸಂದಾಯವಾಗಿದೆ.
ಸ್ವೀಡನ್ನ ಸ್ಟಾಕ್ಹೋಮ್ನಲ್ಲಿ ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ನಲ್ಲಿ ನೊಬೆಲ್ ಕಮಿಟಿ ಕಾರ್ಯದರ್ಶಿ ಥಾಮಸ್ ಪೆರ್ಲಮೆನ್ ಅವರು ಈ ವರ್ಷದ ಮೊದಲ ಕಂತಿನ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದರು. ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೌನರ್(900,357 ಅಮೆರಿಕನ್ ಡಾಲರ್) ಮೊತ್ತ ಒಳಗೊಂಡಿದೆ.
ಆಧುನಿಕ ಮಾನವರ ಜೀನೋಮ್ ಮತ್ತು ನಮ್ಮ ಹತ್ತಿರದ ಅಳಿವಿನಂಚಿನಲ್ಲಿರುವ ನಿಯಾಂಡರ್ತಲ್ ಮತ್ತು ಡೆನಿಸೋವನ್ಸ್ಗಳ ಜೀನೋಮ್ಗಳನ್ನು ಹೋಲಿಸುವ ಸಂಶೋಧನೆಯನ್ನು ಸ್ವಾಂಟೆ ಪಾಬೊ ಮಾಡಿದ್ದಾರೆ. ಸಂಶೋಧನೆಗಳ ಪ್ರಕಾರ ಈ ಎರಡು ಜಾತಿಗಳ ನಡುವೆ ಮಿಶ್ರಣವಿದೆ ಎಂಬುದು ಕಂಡುಬಂದಿದೆ.
ಈ ವಾರ ಉಳಿದ ವಿಭಾಗಗಳ ನೊಬೆಲ್ ಪ್ರಶಸ್ತಿಗಳು ಪ್ರಕಟವಾಗಲಿದೆ. ಮಂಗಳವಾರ ಭೌತಶಾಸ್ತ್ರ, ಬುಧವಾರ ರಸಾಯನಶಾಸ್ತ್ರ, ಗುರುವಾರ ಸಾಹಿತ್ಯ, ಶುಕ್ರವಾರ 2022ರ ನೊಬೆಲ್ ಶಾಂತಿ ಪುರಸ್ಕಾರ ಹಾಗೂ ಅ.10ರಂದು ಅರ್ಥಶಾಸ್ತ್ರ ವಿಭಾಗದಲ್ಲಿ 2022ರ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗಲಿದೆ ಎಂದು ಸಮಿತಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ