ಅಮೇರಿಕಾದಲ್ಲಿ ನೂತನ ದಾಖಲೆ ನಿರ್ಮಿಸಿದ ಮಿಂಚು : ಇದರ ಉದ್ದ ಎಷ್ಟು ಕಿ.ಮೀ. ಇತ್ತು ಗೊತ್ತಾ?
Team Udayavani, Feb 3, 2022, 7:30 AM IST
ವಾಷಿಂಗ್ಟನ್: 2020ರಲ್ಲಿ ಅಮೆರಿಕದಲ್ಲಿ ಅಬ್ಬರಿಸಿದ ಎರಡು ಚಂಡಮಾರುತಗಳು ಎರಡು ಮಿಂಚಿನ ದಾಖಲೆ ನಿರ್ಮಿಸಿವೆ! ಹೌದು. ಅತಿ ಉದ್ದದ ಹಾಗೂ ಅತಿ ಹೆಚ್ಚು ಸಮಯ ಕಾಣಿಸಿಕೊಂಡ ಮಿಂಚು ದಾಖಲಾಗಿರುವುದು 2020ರಲ್ಲಿ.
2020ರ ಏಪ್ರಿಲ್ 29ರಂದು ಅಮೆರಿಕದಲ್ಲಿ ಕಾಣಿಸಿಕೊಂಡ ಮಿಂಚು ಬರೋಬ್ಬರಿ 477 ಮೈಲು ಅಂದರೆ 767 ಕಿ.ಮೀನಷ್ಟು ಉದ್ದವಿತ್ತು. ಟೆಕ್ಸಾಸ್ನಿಂದ ಮಿಸ್ಸಿಸ್ಸಪ್ಪಿವರೆಗೆ ಮಿಂಚು ಮಿಂಚಿತ್ತು. 2018ರಲ್ಲಿ ಬ್ರೆಜಿಲ್ನಲ್ಲಿ ಕಾಣಿಸಿಕೊಂಡ 709ಕಿ.ಮೀ ಉದ್ದದ ಮಿಂಚು ಬರೆದಿದ್ದ ದಾಖಲೆಯನ್ನು ಈ ಮಿಂಚು ಮುರಿದು, ಈವರೆಗಿನ ಅತ್ಯಂತ ಉದ್ದದ ಮಿಂಚಾಯಿತು.
ಇದನ್ನೂ ಓದಿ:ಗೋವಾದಲ್ಲಿ ಬಿಜೆಪಿ 30 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ : ಪ್ರಭು ಚವ್ಹಾಣ್
ಹಾಗೆಯೇ ಅದೇ ವರ್ಷ ಜೂನ್ 18ರಂದು ದಕ್ಷಿಣ ಅಮೆರಿಕದ ಅರ್ಜೆಂಟಿನಾದ ಉರುಗ್ವೆಯಲ್ಲಿ ಮಿಂಚೊಂದು ಬರೋಬ್ಬರಿ 17.1 ಸೆಕೆಂಡುಗಳ ಕಾಲ ಕಾಣಿಸಿಕೊಂಡಿದೆ. ಇದು ಈವರೆಗಿನ ಅತಿ ಹೆಚ್ಚು ಸಮಯ ಕಾಣಿಸಿಕೊಂಡ ಮಿಂಚು. 2019ರ ಮಾರ್ಚ್ನಲ್ಲಿ ಅರ್ಜೆಂಟಿನಾದಲ್ಲಿ 16.73 ಸೆಕೆಂಡಿನ ಮಿಂಚು ಕಾಣಿಸಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ