ಚಳಿಯ ನಂತರ ಈಗ ಧಗೆ!

Team Udayavani, Feb 3, 2019, 12:53 AM IST

ವಾಷಿಂಗ್ಟನ್‌: ಉತ್ತರ ಧ್ರುವದ ಹವಾಮಾನ ವೈಪರೀತ್ಯದ ಪರಿಣಾಮ ಉಂಟಾದ ಮಹಾ ಚಳಿಗೆ ತತ್ತರಿಸಿದ್ದ ಅಮೆರಿಕದ ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾಗಗಳು ಈಗ ಮತ್ತೂಂದು ಗಂಡಾಂತರಕ್ಕೆ ಸಿಲುಕಿವೆ. ಅಲ್ಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದ್ದು, ಮಂಜುಗಡ್ಡೆಯಾಗಿ ಪರಿವರ್ತನೆಯಾಗಿದ್ದ ನದಿ, ಕೆರೆ, ಸಾಗರಗಳೆಲ್ಲವೂ ಪುನಃ ಕರಗಿ ನೀರಾಗುತ್ತಿವೆ. ಇದರ ಪರಿಣಾಮ, ಎಲ್ಲೆಲ್ಲೂ ಪ್ರವಾಹ ಭೀತಿ ಆವರಿಸಿದ್ದು, ಜನಜೀವನ ಮತ್ತಷ್ಟು ಅಸ್ತವ್ಯಸ್ತಗೊಳ್ಳುವ ಭೀತಿ ಆವರಿಸಿದೆ. ಚಳಿಯಿಂದಾಗಿ ಒಟ್ಟು 12 ಮಂದಿ ಬಲಿಯಾಗಿದ್ದರು.

ತರುಣಿಯ ಮೇಲೆ ಚಳಿಯ ಲೀಲೆ!
ಅಮೆರಿಕದ ಮಧ್ಯಪ್ರಾಚ್ಯ ಪ್ರದೇಶ ಸ್ಟೇಟ್ ಆಫ್ ಲೋವಾದ ನಿವಾಸಿ, ಟೇಲರ್‌ ಸ್ಕಾಲನ್‌ ಅವರು ಮಹಾ ಚಳಿ ಆವರಿಸಿದ್ದ ಸಂದರ್ಭದಲ್ಲಿ ಸ್ನಾನ ಮುಗಿಸಿ ಹೊರ ಬಂದ ಕೂಡಲೇ ತಮ್ಮ ಕೂದಲಿನ ನೀರು ಕ್ಷಣಾರ್ಧದಲ್ಲಿ ಮಂಜುಗಡ್ಡೆಯಾಗಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ಲೋಡ್‌ ಮಾಡಿದ್ದು, ಅದೀಗ ವೈರಲ್‌ ಆಗಿದೆ. ಕೂದಲಿನ ನೀರು ಮಂಜುಗಡ್ಡೆಯಾಗಿದ್ದರಿಂದ ಅವು ನೆಟ್ಟಗೆ ತಂತಿಯಂತೆ ನಿಂತಿ ರುವುದು ಅವರಿರುವ ಪ್ರಾಂತ್ಯದ ಹವಾ ಮಾನವನ್ನು ವಿಷದೀಕರಿಸುತ್ತದೆ. ಟ್ವಿಟರ್‌ನಲ್ಲಿ taylor_scallon ಹ್ಯಾಂಡಲ್‌ ಬಾರ್‌ನಡಿ ಈ ವಿಡಿಯೋ ನೋಡಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ