ಮಲೇಶ್ಯ ಎಂಎಚ್‌ 17 ವಿಮಾನ ಹೊಡೆದುರುಳಿಸಿದ 4 ಶಂಕಿತರಲ್ಲಿ 3 ರಶ್ಯನರು, ಓರ್ವ ಉಕ್ರೇನ್

Team Udayavani, Jun 19, 2019, 5:45 PM IST

ನ್ಯೂವೆಜಿನ್‌ : 2014ರ ಜುಲೈಯಲ್ಲಿ ಮಲೇಶ್ಯದ ಎಂಎಚ್‌ 17 ವಿಮಾನವನ್ನು ಹೊಡೆದುರುಳಿಸಲಾಗಿದ್ದ ಪ್ರಕರಣದ ಶಂಕಿತರಾದ ಮೂವರು ರಶ್ಯನರು ಮತ್ತು ಓರ್ವ ಉಕ್ರೇನ್‌ ವ್ಯಕ್ತಿಯ ವಿರುದ್ಧ ತಾವು ಅರೆಸ್ಟ್‌ ವಾರಂಟ್‌ ಜಾರಿ ಮಾಡುವುದಾಗಿ ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ಇಂದು ಬುಧವಾರ ಹೇಳಿದ್ದಾರೆ.

ಡೆನ್ಮಾರ್ಕ್‌ ನೇತೃತ್ವದ ಈ ತನಿಖೆಯು, ರಶ್ಯದ ಮೂವರು ಪ್ರಜೆಗಳಾದ ಇಗೋರ್‌ ಗಿರ್ಕಿನ್‌, ಸರ್‌ಗೆಯಿ ದುಬಿನ್‌ಸ್ಕೀ ಮತ್ತು ಒಲೆಗಾ ಪುಲತೋವ್‌ ಹಾಗೂ ಉಕ್ರೇನ್‌ನ ಲಿಯೋನಿದ್‌ ಖರಶೆಂಕೋ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಹೇಳಿದೆ.

ಮಲೇಶ್ಯ ಏರ್‌ ಲೈನ್ಸ್‌ ವಿಮಾನವನ್ನು ಹೊಡೆದುರುಳಿಸಲಾದ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಶಂಕಿತರ ವಿರುದ್ಧ ನಾವು ಇಂದು ಅಂತಾರಾಷ್ಟ್ರೀಯ ಅರೆಸ್ಟ್‌ ವಾರಂಟ್‌ ಕಳುಹಿಸುತ್ತಿದ್ದೇವೆ. ಈ ಶಂಕಿತರನ್ನು ನಾವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಂಟೆಡ್‌ ಪಟ್ಟಿಗೆ ಕೂಡ ಸೇರಿಸಲಿದ್ದೇವೆ ಎಂದು ನೆದರ್ಲಂಡ್‌ ನ್ಯಾಶನಲ್‌ ಪೊಲೀಸ್‌ ಚೀಫ್ ಕಾನ್‌ಸ್ಟೆಬಲ್‌ ವಿಲ್‌ಬರ್ಟ್‌ ಪೌಲಿಸನ್‌ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ