ಪಾಕಿಸ್ಥಾನದಲ್ಲಿ ಹಾಲು ಲೀ. 140 ರೂ.; ಪೆಟ್ರೋಲ್‌ಗಿಂತಲೂ ದುಬಾರಿ!

ಮೊಹರಂ ಹಿನ್ನೆಲೆಯಲ್ಲಿ ಏರಿದ ದರ

Team Udayavani, Sep 10, 2019, 8:10 PM IST

ಕರಾಚಿ: ಪಾಕಿಸ್ಥಾದಲ್ಲಿ ಆರ್ಥಿಕ ಕುಸಿತ ಒಂದೆಡೆಯಾದರೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಹಾಲಿನ ಬೆಲೆಯೂ ಗಗನಕ್ಕೇರಿದ್ದು ಲೀಟರ್‌ಗೆ 140 ರೂ. ಆಗಿದೆ. ಅಚ್ಚರಿ ಎಂದರೆ ಪಾಕ್‌ನಲ್ಲಿ ಪೆಟ್ರೋಲ್‌ ಬೆಲೆ ಇದಕ್ಕಿಂತ ಕಡಿಮೆ!

ಪಾಕ್‌ನಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 113 ರೂ.ಆಗಿದೆ. ಡೀಸೆಲ್‌ ಬೆಲೆ ಲೀ.ಗೆ 91 ರೂ. ಆಗಿದೆ.

ಕರಾಚಿ ಮತ್ತು ಸಿಂಧ್‌ ಪ್ರಾಂತ್ಯದಲ್ಲಿ ಹಾಲಿಗೆ ಭಾರೀ ದರ ಏರಿಕೆ ಕಂಡುಬಂಇದೆ. ಕರಾಚಿಯಲ್ಲಿ 120 ರೂ.ನಿಂದ 140 ರೂ.ಗೆ ಮಾರಾಟವಾಗಿದೆ. ಮೊಹರಂ ವೇಳೆ ಈ ನಗರಗಳಲ್ಲಿ ತಂಪು ಪಾನೀಯ, ಜ್ಯೂಸ್‌, ಹಾಲಿನ ಅಂಗಡಿಗಳು ತೆರೆಯುತ್ತವೆ. ಮೆರವಣಿಗೆ ಸಾಗುವ ವೇಳೆ ಇವುಗಳ ಮಾರಾಟವೂ ಜೋರಾಗಿರುತ್ತವೆ.

ಹಾಲಿನ ದರ ನಿಯಂತ್ರಣವನ್ನು ಕರಾಚಿ ಆಯುಕ್ತರು ಮಾಡಬೇಕಿದ್ದು, ಅದರ ಹೊಣೆ ಅವರದ್ದಾಗಿದೆ. ಆದರೆ ಈ ವಿಚಾರದಲ್ಲಿ ಅವರೇನೂ ಮಾಡಿದಂತಿಲ್ಲ ಎಂದು ಅಲ್ಲಿನ ವರಿ ಹೇಳಿದೆ. ಅಲ್ಲಿನ ಆಯುಕ್ತರು ಹಾಲಿನ ಗರಿಷ್ಠ ಮಾರಾಟ ದರವನ್ನು ಲೀ.ಗೆ 94 ರೂ. ನಿಗದಿ ಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ