ಸೇಡಿಗಾಗಿ 300 ಮೊಸಳೆ ಬಲಿ
Team Udayavani, Jul 17, 2018, 6:00 AM IST
ಸೊರಾಂಗ್(ಇಂಡೋನೇಷ್ಯಾ): ಇದೆಂಥಾ ಸೇಡು ಎಂದು ಹೌಹಾರುವಂಥ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದೆ. ಇಲ್ಲಿನ ಸೋರಾಂಗ್ನಲ್ಲಿ ಮೊಸಳೆಯೊಂದು 48 ವರ್ಷದ ವ್ಯಕ್ತಿಯನ್ನು ಕೊಂದು ಬಿಟ್ಟಿತು ಎಂಬ ಕಾರಣಕ್ಕೆ ಸ್ಥಳೀಯರು ಇಡೀ ಮೊಸಳೆಯ ವಂಶದ ಮೇಲೆಯೇ ಸೇಡು ತೀರಿಸಿಕೊಂಡಿದ್ದಾರೆ. ಮೊಸಳೆಗಳನ್ನು ಸಂರಕ್ಷಿಸುತ್ತಿರುವ ಫಾರ್ಮ್ನಲ್ಲಿದ್ದ ಬರೋಬ್ಬರಿ 300 ಮೊಸಳೆಗಳನ್ನು ಸ್ಥಳೀಯರು ಮನಬಂದಂತೆ ಹೊಡೆದು ಸಾಯಿಸಿದ್ದಾರೆ. ಸುಗಿಟೋ ಎಂಬ ವ್ಯಕ್ತಿ ತನ್ನ ಜಾನುವಾರುಗಳಿಗೆ ಮೇವು ಹುಡುಕಿಕೊಂಡು ಹೋದಾಗ, ಆಯತಪ್ಪಿ ಮೊಸಳೆಯ ಫಾರ್ಮ್ ನೊಳಗೆ ಬಿದ್ದಿದ್ದರು. ಸಹಜವಾಗಿಯೇ ಮೊಸಳೆಗಳು ಆತನನ್ನು ಕೊಂದುಹಾಕಿದ್ದವು. ಪರಿಹಾರದ ಭರವಸೆ ನೀಡಿದ್ದರೂ, ಜನ ಫಾರ್ಮ್ನಲ್ಲಿದ್ದ 4 ಇಂಚು ಉದ್ದದ ಮರಿಗಳನ್ನೂ ಬಿಡದೇ ಎಲ್ಲ ಮೊಸಳೆಗಳನ್ನೂ ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು