ಫೇಸ್‌ಬುಕ್‌ಗೆ ಮತ್ತಷ್ಟು ಸಂಕಷ್ಟ!

Team Udayavani, Sep 7, 2019, 5:00 AM IST

ನ್ಯೂಯಾರ್ಕ್‌: ಈಗಾಗಲೇ ಒಂದಲ್ಲ ಒಂದು ಹಗರಣಗಳಿಂದ ಸಂಕಷ್ಟಕ್ಕೀಡಾಗಿರುವ ಫೇಸ್‌ಬುಕ್‌ ವಿರುದ್ಧ ಅಮೆರಿಕದಲ್ಲಿ ಮತ್ತೂಂದು ತನಿಖೆ ಆರಂಭವಾಗಿದೆ.

ಶುಕ್ರವಾರ ಈ ಬಗ್ಗೆ ಪ್ರಕಟಿಸಿದ ನ್ಯೂಯಾರ್ಕ್‌ ಅಟಾರ್ನಿ ಜನರಲ್ ಲೆಟಿಟಾ ಜೇಮ್ಸ್‌, ಹಲವು ರಾಜ್ಯಗಳನ್ನು ಪ್ರತಿನಿಧಿಸಿ ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ. ಬಳಕೆದಾರರ ಡೇಟಾ, ಬಳಕೆದಾರರ ಆಯ್ಕೆಯಲ್ಲಿ ಫೇಸ್‌ಬುಕ್‌ನ ಪ್ರಭಾವ ಮತ್ತು ಜಾಹೀರಾತಿನ ಬೆಲೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಫೇಸ್‌ಬುಕ್‌ ವಿರುದ್ಧ ತನಿಖೆ ನಡೆಸಲಾಗುತ್ತದೆ. ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆ ಕೂಡ ಈ ನೆಲದ ಕಾನೂನು ಮತ್ತು ನಿಯಮವನ್ನು ಅನುಸರಿಸಬೇಕು ಎಂದಿದ್ದಾರೆ. ಕೊಲರಾಡೋ, ಫ್ಲೋರಿಡಾ, ಇಯೋವಾ, ನೆಬ್ರಾಸ್ಕಾ, ನಾರ್ತ್‌ ಕೆರೊಲಿನಾ, ಓಹಿಯೋ, ಟೆನ್ನೀಸ್‌ ಹಾಗೂ ಕೊಲಂಬಿಯಾ ರಾಜ್ಯಗಳು ತನಿಖೆ ನಡೆಸಲಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ