ಎವರೆಸ್ಟ್‌ನಲ್ಲಿ ಮತ್ತೆ ನಾಲ್ಕು ಮೃತದೇಹ ಪತ್ತೆ
Team Udayavani, May 25, 2017, 1:25 AM IST
ಕಾಠ್ಮಂಡು: ಮೊನ್ನೆಯಷ್ಟೇ ಜಗತ್ತಿನ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಭಾರತೀಯ ಪರ್ವತಾರೋಹಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಒಬ್ಬ ಮಹಿಳೆ ಸೇರಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಈ ಸಾವುಗಳೊಂದಿಗೆ ಈ ಋತುಮಾನದಲ್ಲಿ ಮೌಂಟ್ ಎವರೆಸ್ಟ್ ಚಾರಣ ಕೈಗೊಂಡ 10 ಜನ ಸಾವಿಗೀಡಾದಂತಾಗಿದೆ. ಪರ್ವತದ 7,950 ಮೀಟರ್ ಎತ್ತರದಲ್ಲಿ ಸ್ಲೊವೋಕಿಯಾದ ಪರ್ವತಾರೋಹಿಯ ಮೃತದೇಹಕ್ಕೆ ಹುಡುಕಾಟ ನಡೆಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ಶಿಬಿರವೊಂದರ ಟೆಂಟ್ ಒಳಗೆ ಈ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೀಡಾದವರಲ್ಲಿ ಇಬ್ಬರು ನೇಪಾಳೀಯರಿದ್ದಾರೆ ಎಂದು ಅವರು ಹೇಳಿದ್ದಾರೆ.