ಬರಾದಾರ್ ಸತ್ತಿಲ್ಲ, ಬದುಕಿದ್ದಾನೆ!
Team Udayavani, Sep 15, 2021, 6:50 AM IST
ಕಾಬೂಲ್: ನೂತನವಾಗಿ ರಚನೆಯಾಗಿರುವ ತಾಲಿಬಾನ್ ಸರಕಾರದ ಉಪ ಪ್ರಧಾನಿಯಾದ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇನ್ನೂ ಜೀವಂತವಾಗಿದ್ದಾನೆ. ಅವರ ಹತ್ಯೆಯಾಗಿಲ್ಲ ಎಂದು ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾರೆ.
ಬರಾದಾರ್ ಜೀವಂತವಾಗಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಕಂದಹಾರ್ನಲ್ಲಿ ಇತ್ತೀಚೆಗೆ ನಡೆದಿದೆಯೆನ್ನಲಾದ ತಾಲಿಬಾನಿಗಳ ಸಭೆಯಲ್ಲಿ ಆತ ಹಾಜರಿರುವ ವೀಡಿಯೋವನ್ನು ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗಿದೆ.
ಈ ಬಗ್ಗೆ ಧ್ವನಿ ಸಂದೇಶ ಬಿಡುಗಡೆ ಮಾಡಿರುವ ತಾಲಿಬಾನ್ ವಕ್ತಾರ ಸಲೈಲ್ ಶಹೀನ್, “ಬರಾದಾರ್ ಸತ್ತಿಲ್ಲ. ಆತ ಇನ್ನೂ ಜೀವಂತವಾಗಿದ್ದಾನೆ. ಅಧಿಕಾರ ಕಿತ್ತಾಟದ ಹಿನ್ನೆಲೆಯಲ್ಲಿ ಅವನನ್ನು ಹತ್ಯೆಗೈಯ್ಯಲಾಗಿದೆ ಎಂಬ ವದಂತಿಗಳು ಸುಳ್ಳು ಹಾಗೂ ಆಧಾರ ರಹಿತ’ ಎಂದಿದ್ದಾನೆ. ಇನ್ನು, ಅಧಿಕಾರ ಹಂಚಿಕೆ ವಿಚಾರದಲ್ಲಿ ತಾಲಿಬಾನಿಗಳು ಹಾಗೂ ಹಕ್ಕಾನಿ ಗುಂಪಿನ ನಡುವೆ ಹೊಡೆದಾಟವಾಗಿದೆ ಎಂಬ ವಿಚಾರವನ್ನೂ ಅಲ್ಲಗಳೆದಿದ್ದಾನೆ.
ಮಹಿಳೆಯರ ಆನ್ಲೈನ್ ಅಭಿಯಾನ :
ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಿನಿಂದ ಚ್ಯುತಿಯಾಗಿರುವ ತಮ್ಮ ಹಕ್ಕುಗಳನ್ನು ರಕ್ಷಿಸುವುದಕ್ಕೋಸ್ಕರ, ಅಫ್ಘಾನಿಸ್ಥಾನದ ಮಹಿಳೆಯರು ಟ್ವೀಟರ್ನಲ್ಲಿ “ಡೋಂಟ್ ಟಚ್ ಮೈ ಕ್ಲಾತ್ಸ್’ ಎಂಬ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಡಿ, ಅಫ್ಘಾನ್ ಮಹಿಳೆಯರು ತಮ್ಮ ದೇಶದ ಸಾಂಪ್ರದಾಯಿಕ ಉಡುಗೆಗಳು, ಆಭರಣಗಳನ್ನು ತೊಟ್ಟು, ತಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದ್ದಾರೆ. ಪ್ರಮುಖವಾಗಿ ಈ ಅಭಿಯಾನ, ತಾಲಿಬಾನಿಗಳು ಜಾರಿಗೊಳಿಸಿರುವ ಡ್ರೆಸ್ ಕೋಡ್ ಅನ್ನು ವಿರೋಧಿಸುವ ಉದ್ದೇಶವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ