ಹಿಜಬ್ ಧರಿಸಿದ್ದ ಮುಸ್ಲಿಂ ಮಹಿಳೆಗೆ ಅವಮಾನ
Team Udayavani, May 15, 2017, 10:58 AM IST
ನ್ಯೂಯಾರ್ಕ್: ಮುಸ್ಲಿಂ ಮಹಿಳೆಯೊಬ್ಬಳು ಹಿಜಬ್ ಧರಿಸಿದ್ದಳೆಂಬ ಕಾರಣಕ್ಕೆ ಬ್ಯಾಂಕಿನಿಂದ ಆಕೆಯನ್ನು ಹೊರಗಟ್ಟಿದ ಘಟನೆ ಅಮೆರಿಕದಲ್ಲಿ ಶುಕ್ರವಾರ ನಡೆದಿದೆ. ಬ್ಯಾಂಕ್ನಲ್ಲಿ ಅಪಮಾನಕ್ಕೀಡಾದ ಅಮೆರಿಕನ್ ಮುಸ್ಲಿಂ ಮಹಿಳೆ ಜಮೀಲಾ ಮಹಮ್ಮದ್ ಈ ಕುರಿತು ಫೇಸ್ಬುಕ್ನಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ಜಮೀಲಾ ಹೀಗೆ ಹೇಳಿದ್ದಾರೆ, ‘ವಾಷಿಂಗ್ಟನ್ನ ಬ್ಯಾಂಕೊಂದಕ್ಕೆ ನನ್ನ ಕಾರಿನ ಕಂತು ಕಟ್ಟಲು ಹೋಗಿದ್ದಾಗ, ಹಿಜಬ್ ತೆಗೆಯದಿದ್ದರೆ ಬ್ಯಾಂಕ್ ಒಳಗೆ ಪ್ರವೇಶ ನೀಡುವುದಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ತಾಕೀತು ಮಾಡಿದರು. ಅಲ್ಲದೇ ಬ್ಯಾಂಕ್ನಿಂದ ಹೊರಗೆ ದೂಡಿ ನನ್ನನ್ನು ನಿಂದಿಸಿದರು ಎಂದಿದ್ದಾರೆ. ‘ಶುಕ್ರವಾರದಂದು ಮುಸ್ಲಿಮರೆಲ್ಲರೂ ಪ್ರಾರ್ಥನೆ ಮಾಡುತ್ತೇವೆ, ಆ ದಿನ ನಾವು ಕಡ್ಡಾಯವಾಗಿ ಹಿಜಬ್ ಧರಿಸುತ್ತೇವೆ. ನಾನೂ ಕೂಡ ಧರಿಸಿದ್ದೆ. ಆದರೆ ಬ್ಯಾಂಕ್ನವರು ನನ್ನ ಜೊತೆ ಅಮಾನುಷವಾಗಿ ನಡೆದುಕೊಂಡರು’ ಎಂದಿದ್ದಾರೆ. ಅಲ್ಲದೇ ಬ್ಯಾಂಕ್ನಲ್ಲಿ ನಡೆದ ಘಟನೆಯನ್ನು ಅವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಕಡೆಗೆ ಬ್ಯಾಂಕ್ ಜಮೀಲಾಗೆ ಕ್ಷಮೆ ಯಾಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!