“ಮಾನವ ಮುಖ” ಹೋಲುವ ವಿಚಿತ್ರ ಕರು ಜನನ; ಅಚ್ಚರಿ ವ್ಯಕ್ತಪಡಿಸಿದ ಟ್ವೀಟಿಗರು

Team Udayavani, Sep 11, 2019, 4:19 PM IST

ಬ್ಯೂನಸ್ ಐರೀಸ್:ಇದು ವಿಚಿತ್ರವಾದರೂ ಸತ್ಯ. ಮಾನವ ಮುಖವನ್ನು ಹೋಲುವ ವಿಚಿತ್ರ ಕರುವೊಂದು ಉತ್ತರ ಅರ್ಜೈಂಟೀನಾದಲ್ಲಿ ಜನಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿದೆ.

ಇತ್ತೀಚೆಗೆ ಅರ್ಜೈಂಟೀನಾದಲ್ಲಿ ಮಾನವ ಮುಖ ಮತ್ತು ಮೂಗನ್ನು ಹೋಲುವ ಕರುವೊಂದು ಜನಿಸಿತ್ತು. ಈ ವಿಡಿಯೋ ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ವಿಚಿತ್ರ ಕರು ಜನಿಸಿದ ಎರಡು ಗಂಟೆಯಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಸನ್ ಪತ್ರಿಕೆಯ ವರದಿ ಪ್ರಕಾರ, ವಿಲ್ಲಾ ಅನಾ ಎಂಬ ಗ್ರಾಮದಲ್ಲಿನ ರೈತರೊಬ್ಬರ ಮನೆಯಲ್ಲಿ ಜನಿಸಿದ್ದ ಈ ವಿಚಿತ್ರ ಕರು ತನ್ನದೇ ತಲೆಯ ಭಾರ ಹೊತ್ತುಕೊಳ್ಳಲಾಗದೆ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

ವೀಡಿಯೋದಲ್ಲಿ ಕರುವನ್ನು ಹುಲ್ಲಿನ ಮೇಲೆ ಮಲಗಿಸಲಾಗಿತ್ತು. ಮನುಷ್ಯನ ಮುಖ ಹೋಲುವ ವಿಚಿತ್ರ ಕರುವಿನ ಮೊದಲ ವೀಡಿಯೋವನ್ನು ಅರ್ಜೈಂಟೀನಾದ ರೈತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.

ತಲೆಬುರುಡೆ ವಿರೂಪಗೊಂಡು ಈ ಕರು ಜನಿಸಿದೆ. ಇದೊಂದು ಅಪರೂಪದ ತಳಿಯ ರೂಪಾಂತರ ಎಂದು ಜೆನೆಟಿಕ್ಸ್ ತಜ್ಞ ನಿಕೋಲಸ್ ಮಾಗ್ನೊವಾ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ದ ಸನ್ ವರದಿ ಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ