ಈ ಗ್ರಾಮದ ರಸ್ತೆಯಲ್ಲಿ ಸಿಗುತ್ತಿದೆ ದುಡ್ಡಿನ ಕಟ್ಟು!
ದುಡ್ಡು ಯಾರದ್ದು? ಯಾಕೆ ಎಸೆಯುತ್ತಿದ್ದಾರೆ ಗೊತ್ತೇ ಇಲ್ಲ; ಹುಡುಕಾಡಿ ಸೋತ ಪೊಲೀಸರಿಗೆ ಫುಲ್ ತಲೆಬಿಸಿ
Team Udayavani, Nov 20, 2019, 7:02 PM IST
ಲಂಡನ್: ಈಶಾನ್ಯ ಇಂಗ್ಲೆಂಡ್ನ ಆ ಪುಟ್ಟ ಗ್ರಾಮದ ರಸ್ತೆಗಳಲ್ಲಿ ಕಳೆದ ಕೆಲ ಸಮಯಗಳಿಂದ ಅಪರೂಪಕ್ಕೊಮ್ಮೆ ದುಡ್ಡಿನ ಕಟ್ಟುಗಳು ಸಿಗುತ್ತಿವೆ. ಈ ದುಡ್ಡ ಯಾರದ್ದು? ಯಾರಾದರೂ ಎಸೆಯುತ್ತಿದ್ದಾರಾ? ಅಥವಾ ದುಡ್ಡು ಸಾಗಾಟದ ವಾಹನ ಹೋಗುವ ವೇಳೆ ಬೀಳುತ್ತಿದೆಯಾ? ಬೇರೇನಾದರೂ ವಿಷ್ಯ ಇದೆಯಾ? ಹೀಗೆ ಯಾವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಗ್ರಾಮಸ್ಥರಿಗೆ ಕೆಲವರಿಗೆ ಇನ್ನೂ ಅಲ್ಲಲ್ಲಿ ದುಡ್ಡು ಸಿಗುತ್ತಲೇ ಇದೆ.
2014ರ ಬಳಿಕ 13 ಬಾರಿ ಕೌಂಟಿ ದುರ್ಹಮ್ನ ಬ್ಲ್ಯಾಕ್ಹಾಲ್ ಕಾಲ್ಲೆರಿ ಎಂಬ ಗ್ರಾಮದಲ್ಲಿ ದುಡ್ಡು ಸಿಕ್ಕಿದೆ. ಎಲ್ಲವೂ 20 ಪೌಂಡ್ ಮುಖಬೆಲೆ ನೋಟುಗಳು. ಒಂದು ಕಟ್ಟಿನಲ್ಲಿ ಸುಮಾರು 2 ಸಾವಿರ ಪೌಂಡ್ನಷ್ಟು ದುಡ್ಡು ಇರುತ್ತದೆ. ಇದೀಗ ಮೊನ್ನೆ ಸೋಮವಾರ ಮತ್ತೆ ಒಂದು ಕಟ್ಟು ದುಡ್ಡು ಇಲ್ಲಿನ ಗ್ರಾಮದ ಪುಟ್ಟ ಗುಂಡಿಯಲ್ಲಿ ಸಿಕ್ಕಿದೆ.
ಅಚ್ಚರಿ ಎಂದರೆ ಪ್ರತಿ ಬಾರಿ ದುಡ್ಡಿನ ಕಟ್ಟು ಸಿಕ್ಕಿದಾಗಲೂ ಗ್ರಾಮಸ್ಥರು ಅತ್ಯಂತ ಪ್ರಾಮಾಣಿಕತೆಯಿಂದ ದುಡ್ಡನ್ನು ತಂದು ಪೊಲೀಸರಿಗೆ ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಅರೆ ದುಡ್ಡು ಯಾರದು ಮಾರ್ರೆ. ಎಲ್ಲಿಂದ ಬರುತ್ತೆ ಇದು ಅಂತ ತಲೆಕೆರೆದು, ಕೆರೆದು ಸುಸ್ತಾಗಿದ್ದಾರೆ. ಸ್ಥಳೀಯ ಡ್ರಗ್ ಮಾರಾಟಗಾರನೊಬ್ಬ ಹೆಚ್ಚಿನ ಹಣ ಇಟ್ಟುಕೊಳ್ಳುವ ಬಗ್ಗೆ ಹೆದರಿ ಹೀಗೆ ಮಾಡಿರಬಹುದು. ಅಥವಾ ದಂಧೆಕೋರರು ಈ ಕೆಲಸ ಮಾಡುತ್ತಿದ್ದಿರಬಹುದು ಎಂದು ಪೊಲೀಸ್ ಗೂಢಚರರು ಊಹಿಸಿದ್ದಾರೆ. ಆದರೂ ದುಡ್ಡು ಯಾಕೆ ಹೀಗೆ ಸಿಗುತ್ತಿದೆ ಎನ್ನುವ ಬಗ್ಗೆ ಉತ್ತರ ಸಿಕ್ಕಿಲ್ಲ. ಇಲ್ಲಿನ ಗ್ರಾಮಸ್ಥರು ಇಂಗ್ಲೆಂಡ್ನ ಅತಿ ಸತ್ಯವಂತ ಜನತೆ ಎಂಬ ಹೆಸರು ಹೊಂದಿದ್ದು, ಪ್ರಾಮಾಣಿಕರಾಗಿ ದುಡ್ಡು ಹಿಂತಿರುಗಿಸಿದರೂ ದುಡ್ಡಿನ ಮೂಲ ಯಾವುದು ಎಂದು ಹುಡುಕಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!