ಕೊರೊನಾ ವೈರಸ್ ಗೆ ಕೋವಿಡ್-19 ಎಂದು ಹೆಸರಿಟ್ಟ WHO: ಮೃತರ ಸಂಖ್ಯೆ 1,110ಕ್ಕೆ ಏರಿಕೆ
Team Udayavani, Feb 12, 2020, 8:37 AM IST
ವುಹಾನ್ : ಚೀನಾವನ್ನು ಅಕ್ಷರಶಃ ನಲುಗಿಸಿ ಮರಣ ಮೃದಂಗಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಎಂದು ಹೆಸರಿಟ್ಟಿದೆ. ಏತನ್ಮಧ್ಯೆ ಮಾರಾಣಾಂತಿಕ ವೈರಸ್ ಗೆ ಬಲಿಯಾದವರ ಸಂಖ್ಯೆ 1,110ಕ್ಕೆ ಏರಿದೆ.
ಕೋವಿಡ್ -19 ಎಂದರೆ ಸಿಓ-ಕೊರೊನಾ, ವಿ-ವೈರಸ್ ಹಾಗೂ ಡಿ-ಡಿಸೀಸ್ ಎಂಬರ್ಥವಿದೆ. ಇದು 2019 ಡಿಸೆಂಬರ್ 31 ರಂದು ಪತ್ತೆಯಾದ ಕಾರಣ 19 ಎಂದು ಸೇರಿಸಲಾಗಿದೆ.
ಈ ನಡುವೆ ಮಾರಕ ವೈರಸ್ ಗೆ ಮಂಗಳವಾರ ಒಂದೇ ದಿನ ಹುಬೈ ಪ್ರಾಂತ್ಯದಲ್ಲಿ 94 ಜನರು ಬಲಿಯಾಗಿದ್ದಾರೆ. ಮಾತ್ರವಲ್ಲದೆ ಹೊಸದಾಗಿ 1,638 ಜನರು ಸೋಂಕುವಿಗೆ ತುತ್ತಾಗಿದ್ದಾರೆ. ಹಾಗಾಗಿ ಸೋಂಕು ಧೃಢಪಟ್ಟವರ ಪ್ರಮಾಣ 44,200 ಜನರಿಗೆ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಜ್ಞ ವೈದ್ಯರ ತಂಡವೊಂದು ಚೀನಾಕ್ಕೆ ಆಗಮಿಸಿದ್ದು ರೋಗ ನಿಯಂತ್ರಣಕ್ಕೆ ಸೂಕ್ತ ನೆರವು ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ