Udayavni Special

ಇನ್ಫಿ ಮೂರ್ತಿ ಅಳಿಯ ರಿಷಿಯ ಹೊಣೆಗಾರಿಕೆ ಸಣ್ಣದಲ್ಲ

ಬ್ರಿಟನ್‌ ಅರ್ಥ ಸಚಿವರಾಗಿದ್ದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆ

Team Udayavani, Feb 15, 2020, 6:15 AM IST

Narayana-Murthy,-Rishi-Sunak

ಮಣಿಪಾಲ: ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸರಕಾರದಲ್ಲಿ ಹಣಕಾಸು ಸಚಿವರಾದ ಸುದ್ದಿಗೆ ಶುಕ್ರವಾರವೂ ಸಾಮಾಜಿಕ ಮಾಧ್ಯಮದಲ್ಲಿ ಮಹತ್ವ ಸಿಕ್ಕಿತ್ತು. ಬ್ರಿಟನ್‌ನ ಹೊಸ ಆರ್ಥಿಕತೆ ಯನ್ನು ಅವರು ಸಮರ್ಥವಾಗಿ ನಿಭಾಯಿಸಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

ಗುರುವಾರ ಅವರ ನೇಮಕದ ಘೋಷಣೆ ಪ್ರಕಟ ವಾಗುತ್ತಿದ್ದಂತೆ ಟ್ವಿಟರ್‌ ನಲ್ಲಿ ಸಾಕಷ್ಟು ಪೋಸ್ಟ್‌ಗಳು ಹರಿದಾಡಿದವು. ಅವರ ವ್ಯಕ್ತಿ ವಿವರದಿಂದ ಹಿಡಿದು, ಅವರ ಇದು ವರೆಗಿನ ಕಾರ್ಯ ನಿರ್ವಹಣೆ ಕುರಿತೂ ಚರ್ಚೆಗಳು ನಡೆದಿವೆ. ಹಲವಾರು ಭಾರತೀಯ ಸಂಸದರ ಸಹಿತ ಸಾಕಷ್ಟು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ. ನಾರಾಯಣಮೂರ್ತಿಯವರೂ ಇಮೇಲ್‌ ಮೂಲಕ ಶುಭಾಶಯ ಕೋರಿ, ಜನರ ಸೇವೆ ಮಾಡಲು ಇದೊಂದು ಒಳ್ಳೆಯ ಅವಕಾಶ ಎಂದು ಅಭಿಪ್ರಾಯಪಟ್ಟಿದ್ದಾರೆ. ರಿಷಿ ಅವರು ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯನ್ನು 2009ರಲ್ಲಿ ವರಿಸಿದ್ದರು.

ಐರೋಪ್ಯ ಒಕ್ಕೂಟದಿಂದ ಹೊರಬಂದಿರುವ ಬ್ರಿಟನ್‌ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುವ ಸವಾಲು ರಿಷಿ ಮುಂದಿದೆ. ಬ್ರಿಟನ್‌ ಸರಕಾರದ್ದು 2.7 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿದ್ದು, ಹೊಸ ವಾಣಿಜ್ಯ ಒಪ್ಪಂದಗಳ ಮೂಲಕ ಜಗತ್ತಿನ ವಿವಿಧ ದೇಶಗಳೊಂದಿಗೆ ಬ್ರಿಟನನ್ನು ಬೆಸೆಯುವ ಮಹತ್ತರ ಹೊಣೆಗಾರಿಕೆ ಇವರ ಮೇಲಿದೆ.

1980ರಲ್ಲಿ ಜನನ
40 ವರ್ಷದ ರಿಷಿ ಸುನಾಕ್‌ 1980ರಲ್ಲಿ ಹ್ಯಾಂಪ್‌ ಶೈನ್‌ ಸೌಥಾಂಪ್ಟನ್‌ನಲ್ಲಿ ಜನಿಸಿದವರು. ರಿಷಿ ಕುಟುಂಬಸ್ಥರು ಮೂಲತಃ ಪಂಜಾಬ್‌ನವರು. ರಿಷಿ ಅವರ ಅಜ್ಜ ಅರುವತ್ತರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಹೋಗಿದ್ದರು. ಆ ಬಳಿಕ ಅವರ ಕುಟುಂಬ ಅಲ್ಲೇ ನೆಲೆಸಿದೆ. ರಿಷಿ ತಂದೆ ಯಶ ವೀರ್‌ ವೃತ್ತಿಯಲ್ಲಿ ವೈದ್ಯರು. ತಾಯಿ ಉಷಾ ಔಷಧ ವ್ಯಾಪಾರ ಮಾಡುತ್ತಿದ್ದಾರೆ. ಆಕÕ…ಫ‌ರ್ಡ್‌ನ ಲಿಂಕನ್‌ ಕಾಲೇಜಿನಲ್ಲಿ ರಾಜಕೀಯ, ಆರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ರಿಷಿ, ಸ್ಟಾನ್‌ಫೋರ್ಡ್‌ ವಿ.ವಿ.ಯಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.

ರಾಜಕೀಯದಲ್ಲಿ
2015ರ ಸಾರ್ವತ್ರಿಕ ಚುನಾವಣೆಗೆ ಕನ್ಸರ್ವೇ ಟಿವ್‌ ಪಕ್ಷದಿಂದ ಉತ್ತರ ಯಾರ್ಕ್‌ಶೈರ್‌ನ ರಿಚ¾ಂಡ್‌ ಕ್ಷೇತ್ರದಿಂದ ಸ್ಪರ್ಧಿಸಿ ರಿಷಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. ಮೊದಲ ಯತ್ನದಲ್ಲಿಯೇ ಜಯ ಭೇರಿ ಬಾರಿಸಿ ಸಂಸತ್‌ನ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಆಯ್ಕೆ ಸಮಿತಿ ಸದಸ್ಯ ರಾಗಿ 2 ವರ್ಷ ಕೆಲಸ ಮಾಡಿದರು.

ಭಗವದ್ಗೀತೆ ಹೆಸರಲ್ಲಿ ಪ್ರಮಾಣ
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಬೇರ್ಪಡುವ ಬ್ರೆಕ್ಸಿಟ್‌ ಒಪ್ಪಂದಕ್ಕೆ ರಿಷಿ ಸುನಾಕ್‌ ಬೆಂಬಲ ನೀಡಿದರು. ಬ್ರೆಕ್ಸಿಟ್‌ ವಿಚಾರಕ್ಕೆ ಸಂಬಂಧಿಸಿ 2017ರಲ್ಲಿ ಬ್ರಿಟನ್‌ನಲ್ಲಿ ಅವಧಿಗೆ ಮುನ್ನವೇ ಸಾರ್ವತ್ರಿಕ ಚುನಾವಣೆ ನಡೆಯಿತು. ರಿಷಿ ಈ ಚುನಾವಣೆಯಲ್ಲಿ ಮತ್ತಷ್ಟು ಹೆಚ್ಚು ಮತಗಳ ಅಂತರದಿಂದ ಪುನರಾಯ್ಕೆಯಾದರು. ಆಗ ಅವರು ಭಗವದ್ಗೀತೆಯ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದರು.

ಬ್ರಿಟನ್‌ ಪ್ರಧಾನಿ ಜತೆ
ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಆಪ್ತ ಸಹಾಯಕರಾಗಿದ್ದ ರಿಷಿ ಸುನಾಕ್‌ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಟ್ರೆಷರಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ, ಬ್ರಿಟನ್‌ ದೇಶದ ರಾಣಿಯ ಮಹಾ ಮಂಡಳಿಯ (ಪ್ರೈವಿ ಕೌನ್ಸಿಲ…) ಸದಸ್ಯರಾಗಿದ್ದರು. ಪ್ರೈವಿ ಕೌನ್ಸಿಲ್‌ ಎಂಬುದು ಬ್ರಿಟನ್‌ನ ಅತ್ಯುಚ್ಚ ಮಂಡಳಿ.

ಈ ಹಿಂದೆ ಕರ್ನಾಟಕದ ಕಲಬುರಗಿ ಮೂಲದ ನೀರಜ್‌ ಪಾಟೀಲ್‌ ಲಂಡನ್‌ನಲ್ಲಿ ವೈದ್ಯರಾಗಿದ್ದು, 2010ರಿಂದ 2011ರ ವರೆಗೆ ಅಲ್ಲಿನ ಮೇಯರ್‌ ಆಗಿ ಕಾರ್ಯ ನಿರ್ವಹಿಸಿದ್ದರು.

15 ಭಾರತೀಯ ಸಂಸದರು
ಬ್ರಿಟನ್‌ ಸಂಸತ್‌ನಲ್ಲಿ ಭಾರತ ಮೂಲದ ವ್ಯಕ್ತಿಗಳು ವಿವಿಧ ರಾಜಕೀಯ ಪಕ್ಷಗಳಲ್ಲಿ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದೇ ಮೊದಲು?
ಕರ್ನಾಟಕದೊಂದಿಗೆ ಸಂಬಂಧ ಹೊಂದಿರುವವರು ಬ್ರಿಟಿಷ್‌ ಸರಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆಯೇ ಎಂಬ ಮಾಹಿತಿ ಹುಡುಕಿದರೂ ಬೇರೊಂದು ಉದಾಹರಣೆ ಸಿಕ್ಕಿಲ್ಲ. ಹಾಗಾಗಿ ಇದೇ ಮೊದಲ ಬಾರಿಗೆ ರಾಜ್ಯದ ಅಳಿಯ ಈ ಉನ್ನತ ಸ್ಥಾನಕ್ಕೇರಿದಂತಾಗಿದೆ. ರಿಷಿ ಸಾಧನೆಗೆ ದೇಶದೆಲ್ಲೆಡೆಯಿಂದ ಅಭಿನಂದನೆಯ ಮಹಾಪೂರ ಹರಿದು ಬಂದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

Leopard-climbs-tree

ವಿಡಿಯೋ: ಬೇಟೆಯೊಂದಿಗೆ ಅನಾಯಾಸವಾಗಿ ದೈತ್ಯಗಾತ್ರದ ಮರ ಏರಿದ ಚಿರತೆ, ನೆಟ್ಟಿಗರು ಫುಲ್ ಫಿದಾ

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್: ಮಂಗನ ಕಾಯಿಲೆ ತಡೆಗೆ ಮಲೆನಾಡಿನಲ್ಲಿ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ನಾರ್ವೆ: ಬದುಕು ಮತ್ತೆ ಸಹಜ ಸ್ಥಿತಿಯತ್ತ

ನಾರ್ವೆ: ಬದುಕು ಮತ್ತೆ ಸಹಜ ಸ್ಥಿತಿಯತ್ತ

ಸೋಂಕು ಹೊತ್ತೂಯ್ದ ನೈಲ್‌ ಕ್ರೂಸ್‌ !

ಸೋಂಕು ಹೊತ್ತೂಯ್ದ ನೈಲ್‌ ಕ್ರೂಸ್‌ !

ನಿತ್ಯವೂ 80 ಮಂದಿಗೆ ಅನ್ನದಾತ ಇವರು

ನಿತ್ಯವೂ 80 ಮಂದಿಗೆ ಅನ್ನದಾತ ಇವರು

ಚೀನಾದಿಂದ ಹರಡಿದ Covidಗೆ ಜಾಗತಿಕವಾಗಿ ಎಷ್ಟು ಲಕ್ಷ ಕೋಟಿ ನಷ್ಟ,ನಿರುದ್ಯೋಗ ಭೀತಿ; ಮುಂದೇನು

ಚೀನಾದಿಂದ ಹರಡಿದ Covidಗೆ ಜಾಗತಿಕವಾಗಿ ಎಷ್ಟು ಲಕ್ಷ ಕೋಟಿ ನಷ್ಟ,ನಿರುದ್ಯೋಗ ಭೀತಿ; ಮುಂದೇನು?

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

09-April-18

ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

09-April-17

ನಗರದಲ್ಲೇ ಸಿದ್ಧಗೊಳ್ಳುತ್ತಿವೆ ವೈದ್ಯರಿಗೆ ಪಿಪಿಇ ಕಿಟ್‌