ಪ್ರಧಾನಿ ಮೋದಿ ಫೇಸ್ ಬುಕ್ ಜನಪ್ರಿಯತೆ ಟ್ರಂಪ್ ಗಿಂತ ದುಪ್ಪಟ್ಟು!
Team Udayavani, May 2, 2018, 5:27 PM IST
ಜಿನೇವಾ : ”ಫೇಸ್ ಬುಕ್ನಲ್ಲಿ ವಿಶ್ವ ನಾಯಕರು” ಕುರಿತಾಗಿ ಬರ್ಸನ್ ಕೋಹನ್ ಮತ್ತು ವೂಲ್ಫ್ ನಡೆಸಿರುವ ಅಧ್ಯಯನದ ವರದಿಯನ್ನು ಇಂದು ಬುಧವಾರ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ಅನೇಕ ವಿಶ್ವ ನಾಯಕರಿಗಿಂತ ಸಾಮಾಜಿಕ ಜಾಲ ತಾಣದ ಜನಪ್ರಿಯತೆಯಲ್ಲಿ ಎಷ್ಟೋ ಮುಂದಿರುವುದು ಕಂಡು ಬಂದಿದೆ.
ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಕಾರ ಫೇಸ್ ಬುಕ್ನಲ್ಲಿ 43.2 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ಮೋದಿ ವಿಶ್ವ ನಾಯಕರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಟ್ರಂಪ್ ಅವರಿಗಿಂತ ಈ ಸಂಖ್ಯೆ ದುಪ್ಪಟ್ಟಿರುವುದು ದೊಡ್ಡ ಸಾಧನೆಯೇ ಆಗಿದೆ.
ಟ್ವಿಟರ್ನಲ್ಲಿ ಮೋದಿಗಿಂತ ಮುಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೇಸ್ ಬುಕ್ ನಲ್ಲಿ 23.1 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಈ ಅಧ್ಯಯನವು 2017ರ ಜನವರಿ 1ರಿಂದ ಫೇಸ್ ಬುಕ್ನಲ್ಲಿ ಸಕ್ರಿಯರಾಗಿರುವ ಸುಮಾರು 650 ವಿಶ್ವ ನಾಯಕರು ಮತ್ತು ವಿದೇಶ ಸಚಿವರ ಚಟುವಟಿಕೆಗಳನ್ನು ವಿಶ್ಲೇಷಿಸಿದೆ. ಅದಕ್ಕಾಗಿ ಫೇಸ್ ಬುಕ್ ನ ಕ್ರೌಡ್ ಟ್ಯಾಂಗಲ್ ಸಲಕರಣೆಯನ್ನು ಅದು ಬಳಸಿಕೊಂಡಿದೆ.
ಕಳೆದ ಹದಿನಾಲ್ಕು ತಿಂಗಳಲ್ಲಿ ವಿಶ್ವದ ಎಲ್ಲ ನಾಯಕರ ಪೈಕಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಫೇಸ್ಬುಕ್ನಲ್ಲಿ ಗರಿಷ್ಠ ಸಂಖ್ಯೆಯಲ್ಲಿ, ಒಟ್ಟು 204.9 ದಶಲಕ್ಷ ಸಂವಹನಗಳನ್ನು (ಕಮೆಂಟ್ಸ್, ಲೈಕ್ಸ್ ಮತ್ತು ಶೇರ್ಗಳನ್ನು ಒಳಗೊಂಡಂತೆ) ನಡೆಸಿರುವುದು ಅತೀ ದೊಡ್ಡ ದಾಖಲೆಯಾಗಿದೆ.
ಪ್ರಧಾನಿ ಮೋದಿ ಅವರ ಫೇಸ್ ಬುಕ್ ಸಂವಹನ ಸಂಖ್ಯೆಯು 113.6 ದಶಲಕ್ಷ ಆಗಿದ್ದು ಇದರ ದುಪ್ಪಟ್ಟಿಗಿಂತಲೂ ಹೆಚ್ಚು ಟ್ರಂಪ್ ಅವರ ದಾಖಲೆಯಾಗಿದೆ.
ಇಂಡೋನೇಶ್ಯದ ಅಧ್ಯಕ್ಷ ಜೋಕೋ ವಿದೋದೋ ನಡೆಸಿರುವ ಫೇಸ್ ಬುಕ್ ಸಂವಹನ 46 ದಶಲಕ್ಷ; ಕಾಂಬೋಡಿಯದ ಪ್ರಧಾನಿ ಸಮದೇಚ್ ಹುನ್ ಸೆನ್ ಮತ್ತು ಆರ್ಜೆಂಟೀನಾ ಅಧ್ಯಕ್ಷ ಮಾರಿಶಿಯೋ ಮ್ಯಾಕ್ರಿ ನಡೆಸಿರುವ ಫೇಸ್ ಬುಕ್ ಸಂವಹನಗಳು ಅನುಕ್ರಮವಾಗಿ 36 ಮತ್ತು 33.4 ದಶಲಕ್ಷ ಸಂಖ್ಯೆಯಲ್ಲಿ ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ