ಭೂಮಿಯ ವೀಡಿಯೋ ಸೆರೆಹಿಡಿದ ನಾಸಾ
Team Udayavani, Nov 19, 2017, 6:30 AM IST
ಕೇಪ್ ಕಾರ್ನಿವಾಲ್: ವಿವಿಧ ಋತುಗಳಲ್ಲಿ ಭೂಮಿ ಹೇಗೆ ಕಾಣುತ್ತದೆ ಎಂಬುದರ ಚಿತ್ರವನ್ನು ನಾಸಾ ಹಲವು ಬಾರಿ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಭೂಮಿಯ ಕಾಲ ಕಾಲದ ಚಿತ್ರಗಳನ್ನೂ ನಾವು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಭೂಮಿಯ 20 ವರ್ಷಗಳ ಚಿತ್ರಗಳನ್ನೇ ಇಟ್ಟುಕೊಂಡು ಎರಡೂವರೆ ನಿಮಿಷದ ವೀಡಿಯೋವನ್ನು ನಾಸಾ ರೂಪಿಸಿದೆ. ಬಾಹ್ಯಾಕಾಶದಿಂದ ಭೂಮಿಯ ವರ್ಷ ಹಾಗೂ ಋತುಗಳು ಕಳೆದಂತೆ ಹೇಗೆ ಬದಲಾಗುತ್ತ ಸಾಗುತ್ತದೆ ಎಂಬುದರ ಸಂಕ್ಷಿಪ್ತ ಚಿತ್ರಣ ಇದರಲ್ಲಿದೆ.
ಹಿಮಾಚ್ಛಾದಿತ ಭೂಮಿಯಲ್ಲಿ ಬಿಳಿ ಬಣ್ಣವು ಕಾಲ ಕ್ರಮೇಣ ಕಡಿಮೆಯಾಗುತ್ತಿರುವುದನ್ನು ಇದರಲ್ಲಿ ಕಾಣ ಬಹುದು. ಇನ್ನೊಂದೆಡೆ ಸಮುದ್ರದ ಬಣ್ಣವೂ ಕಾಲ ಕಾಲಕ್ಕೆ ಬದಲಾಗಿದ್ದು, ಇದು ಸಮುದ್ರದಾಳದಲ್ಲಿ ಜಲಚರಗಳ ಸಾಂದ್ರತೆಯನ್ನು ಸೂಚಿಸುತ್ತದೆ. 1997ರ ಸೆಪ್ಟಂಬರ್ನಿಂದ 2017ರ ಸೆಪ್ಟಂಬರ್ ವರೆಗಿನ ಚಿತ್ರಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಇದು ಭೂಮಿ ಉಸಿರಾಡಿದಂತಿದೆ. ಈ ವೀಡಿಯೋವನ್ನು ನೋಡುವುದು ಅದ್ಭುತ ಅನುಭವ ಎಂದು ನಾಸಾದ ಜೆರೆಮಿ ವೆರ್ಡೆಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ