ಕೇರಳ, ಕೊಡಗು ಮಳೆ ಲೆಕ್ಕಾಚಾರ ಹಾಕಿದ ನಾಸಾ

Team Udayavani, Aug 23, 2018, 6:00 AM IST

ವಾಷಿಂಗ್ಟನ್‌: ಕೇರಳ ಹಾಗೂ ಕೊಡಗಿನಲ್ಲಿ ಭೀಕರ ಪ್ರವಾಹಕ್ಕೆ ಕಾರಣವಾದ ಮಳೆಯ ತೀವ್ರತೆಯ ಲೆಕ್ಕಾಚಾರ ಒದಗಿಸುವ ವೀಡಿಯೋವೊಂದನ್ನು ನಾಸಾ ಬುಧವಾರ ಬಿಡುಗಡೆ ಮಾಡಿದೆ.

ಉಪಗ್ರಹಗಳ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಮಳೆ ಲೆಕ್ಕ ಹಾಕಿರುವ ಅಮೆರಿಕದ ಖಗೋಳ ಅಧ್ಯಯನ ಸಂಸ್ಥೆ, ಆ.13ರಿಂದ 20ರ ತನಕ ಎರಡು ಆವೃತ್ತಿಗಳಲ್ಲಿ ಭಾರೀ ಮಳೆ ಸುರಿದಿದೆ ಎಂದು ಹೇಳಿದೆ.  ಮೊದಲ ಆವೃತ್ತಿಯ ಮಳೆ ವಿಶಾಲವಾಗಿತ್ತು ಮತ್ತು ದೇಶದ ಉತ್ತರ ಭಾಗದ ತನಕ ವ್ಯಾಪಿಸಿತ್ತು. ವಾರದ ಮಳೆಯ ಒಟ್ಟು ಪ್ರಮಾಣ ಪಶ್ಚಿಮ ಭಾಗದಲ್ಲಿ 12.7 ಸೆಂ.ಮೀ.ಗಳಷ್ಟಿದ್ದರೆ, ಬಂಗಾಲಕೊಲ್ಲಿಯ ಪೂರ್ವ ಭಾಗದಲ್ಲಿ 35.56 ಸೆಂ.ಮೀ.ಗಳಷ್ಟಿತ್ತು. ಎರಡನೆಯ ಆವೃತ್ತಿಯ ಮಳೆ ಹೆಚ್ಚು ಸಾಂದ್ರ ಮತ್ತು ತೀವ್ರವಾಗಿತ್ತು ಹಾಗೂ ದೇಶದ ನೈಋತ್ಯ ಕರಾವಳಿ ಹಾಗೂ ಪಶ್ಚಿಮ ಘಟ್ಟಯತ್ತವೇ ಕೇಂದ್ರೀಕೃತವಾಗಿತ್ತು. ಸಾಮಾನ್ಯವಾಗಿ ವಾರಕ್ಕೆ 25.4 ಸೆಂ.ಮಿ.ನಷ್ಟು ಬೀಳುವ ಮಳೆ ಈ ಬಾರಿ 40.64 ಸೆಂ.ಮೀ.ಗಳನ್ನು ದಾಟಿತ್ತು. ಗರಿಷ್ಠ 46.99 ಸೆಂ.ಮೀ.ಗಳ ತನಕವೂ ತಲುಪಿತ್ತು ಎಂದು ನಾಸಾ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ