ಸೌರವ್ಯೂಹದ ಹೊರಗಡೆ ಭೂಮಿ ಗಾತ್ರದ ಆಕಾಶ ಕಾಯ ಪತ್ತೆ

ಇದರ ಕಕ್ಷೆ ಪರಿಭ್ರಮಣ ವೇಗ ಕೇವಲ ಎಂಟು ದಿನಗಳು ; ನಾಸಾದ ‘ಟೆಸ್‌’ ಉಪಗ್ರಹದಿಂದ ಪತ್ತೆ

Team Udayavani, Apr 16, 2019, 3:30 PM IST

NASA-TESS-Sattelite-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used

ವಾಷಿಂಗ್ಟನ್‌: ನಾಸಾ ಬಹ್ಯಾಕಾಶ ಸಂಸ್ಥೆಯು ಹಾರಿಬಿಟ್ಟಿರುವ ಗ್ರಹ ಪತ್ತೆ ಉಪಗ್ರಹ ‘ಟೆಸ್‌’ (ಟ್ರಾನ್ಸಿಟಿಂಗ್‌ ಎಕ್ಸ್‌ಪ್ಲೊನೆಟ್ಸ್‌ ಸರ್ವೇ ಸೆಟಲೈಟ್‌) ಸುಮಾರು 53 ಜ್ಯೋತಿರ್‌ ವರ್ಷಗಳ ದೂರದಲ್ಲಿ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವ ಭೂಮಿ ಗಾತ್ರದ ಆಕಾಶ ಕಾಯವೊಂದನ್ನು ಪತ್ತೆಹಚ್ಚಿದೆ. ಮಾತ್ರವಲ್ಲದೇ ಇದೇ ಮಂಡಲ ವ್ಯವಸ್ಥೆಯಲ್ಲಿ ಬಿಸಿಯಾಗಿರುವ ಉಪ-ನೆಫ್ಚೂನ್‌ ಗಾತ್ರದ ವಿಶ್ವವೊಂದನ್ನೂ ಸಹ ಟೆಸ್‌ ಪತ್ತೆಮಾಡಿದೆ.

ಒಂದು ವರ್ಷದ ಹಿಂದೆ ಹಾರಿಬಿಟ್ಟಿರುವ ಈ ಗ್ರಹ ಪತ್ತೆ ಉಪಗ್ರಹವು ಇಷ್ಟು ಕಡಿಮೆ ಕಾಲಾವಧಿಯಲ್ಲಿ ನೂತನ ಗ್ರಹಗಳ ಪತ್ತೆಯಲ್ಲಿ ಒಂದು ಗೇಮ್‌ ಚೇಂಜರ್‌ ಆಗಿ ರೂಪುಗೊಂಡಿರುವುದಕ್ಕೆ ನಾಸಾ ವಿಜ್ಞಾನಿಗಳು ಸಂತಸಗೊಂಡಿದ್ದಾರೆ. ಈ ಉಪಗ್ರಹವು ಆಕಾಶದ ಸರ್ವೇಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದೀಗ ವಿಜ್ಞಾನಿಗಳು ಭೂಮಿಯಲ್ಲಿ ಸ್ಥಾಪಿಸಿರುವ ದೈತ್ಯ ದೂರದರ್ಶಕಗಳನ್ನು ಬಳಸಿಕೊಂಡು ಈ ಉಪಗ್ರಹದೊಂದಿಗೆ ಸಂವಹನ ಸಾಧಿಸಿ ಈಗ ಪತ್ತೆಯಾಗಿರುವ ದೈತ್ಯ ಆಕಾಶಕಾಯಗಳ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಚಿಲಿಯಲ್ಲಿ ಸ್ಥಾಪಿಸಲಾಗಿರುವ ಮೆಗೆಲನ್‌ II ಟೆಲಿಸ್ಕೋಪ್‌ ನಲ್ಲಿರುವ ಗ್ರಹ ಪತ್ತೆ ಸ್ಪೆಕ್ಟ್ರೋಗ್ರಾಫ್ ಈ ವಿಚಾರದಲ್ಲಿ ವಿಜ್ಞಾನಿಗಳಿಗೆ ಇನ್ನಷ್ಟು ಮಾಹಿತಿ ನೀಡಬಹುದಾಗಿರುವ ಉಪಕರಣಗಳಲ್ಲಿ ಒಂದಾಗಿದೆ.

ಈ ಅಜ್ಞಾತ ಬೃಹತ್‌ ಆಕಾಶ ಕಾಯದ ಹೊರ ಮೈ ಸಂರಚನೆಯ ಕುರಿತಾಗಿ ತಿಳಿದುಕೊಳ್ಳದೇ ಅಂತಹ ಗ್ರಹಗಳ ಸಾಂದ್ರತೆ ಮತ್ತು ರಾಸಾಯನಿಕ ಸಂರಚನೆಗಳನ್ನು ತಿಳಿದುಕೊಳ್ಳುವುದು ಕಷ್ಟಸಾಧ್ಯವಾಗಿರುತ್ತದೆ. ಇನ್ನು ಇದೇ ಉಪಗ್ರಹ ಪತ್ತೆ ಮಾಡಿರುವ ಸಬ್‌-ನೆಫ್ಚೂನ್‌ ಹೆಚ್‌.ಡಿ. 21749ಬಿ ಇದುವರೆಗೆ ಟೆಸ್‌ ಪತ್ತೆ ಮಾಡಿರುವ ಆಕಾಶಕಾಯಗಳಲ್ಲೇ ತನ್ನ ಕಕ್ಷೆ ಪರಿಭ್ರಮಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾಯವಾಗಿದೆ.

ಇದಕ್ಕೆ ತನ್ನ ಕಕ್ಷೆಗೆ ಒಂದು ಸುತ್ತು ಬರಲು 36 ದಿನಗಳು ಬೇಕಾಗುತ್ತದೆ. ಇದು ಪರಿಭ್ರಮಿಸುತ್ತಿರುವ ನಕ್ಷತ್ರ ನಮ್ಮ ಸೂರ್ಯನಿಗಿಂತ 80 ಪ್ರತಿಶತ ಹೆಚ್ಚು ದೊಡ್ಡದಾಗಿದೆ. ಮತ್ತು ಇದು ನಮ್ಮ ಭೂಮಿಯಿಂದ 56 ಜ್ಯೋತಿರ್‌ ವರ್ಷಗಳಷ್ಟು ದೂರದಲ್ಲಿದೆ. ಹೆಚ್‌.ಡಿ. 21749ಬಿ ಭೂಮಿಗಿಂತ 23 ಪಟ್ಟು ದೊಡ್ಡದಾಗಿದೆ ಮತ್ತಿದರ ಪರಿಧಿ ಭೂಮಿಯ 2.7 ಪಟ್ಟು ಹೆಚ್ಚಾಗಿದೆ.

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.