ಮಾರ್ಚ್ 13ರಂದು ಹೊಸ ಅಧ್ಯಕ್ಷರನ್ನು ಚುನಾಯಿಸುವ ನೇಪಾಲ
Team Udayavani, Feb 23, 2018, 4:32 PM IST
ಕಾಠ್ಮಂಡು : ನೇಪಾಲ ಮಾರ್ಚ್ 13ರಂದು ಅಧ್ಯಕ್ಷೀಯ ಚುನಾವಣೆ ನಡೆಸಲಿದೆ. ಹೊಸದಾಗಿ ಚುನಾಯಿತರಾಗುವ ಅಧ್ಯಕ್ಷರು ನೇಪಾಲದ ಮೊತ್ತ ಮೊದಲ ಮಹಿಳಾ ಅಧ್ಯಕ್ಷರಾಗಿರುವ ಬಿದ್ಯಾ ದೇವಿ ಭಂಡಾರಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ನೇಪಾಲದಲ್ಲಿ ಅಧ್ಯಕ್ಷರ ಚುನಾವಣೆ ನಡೆಯುವುದು ಐದು ವರ್ಷಗಳಿಗೊಮ್ಮೆ; ಆದರೆ ಈ ಬಾರಿ ಎರಡೂವರೆ ವರ್ಷದೊಳಗೇ ಹೊಸ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಹೊಸ ಸಂವಿಧಾನದ ಪ್ರಕಾರ ದೇಶವು ಸಂಪೂರ್ಣವಾಗಿ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಈ ಮೂಲಕ ನೇಪಾಲ ಕೇಂದ್ರೀಕೃತ ರಾಜಕೀಯ ವ್ಯವಸ್ಥೆಗೆ ವಿದಾಯ ಹೇಳಿದೆ.
ಚುನಾವಣಾ ಆಯೋಗದ ಅಧಿಕಾರಿಗಳು ನಿನ್ನೆ ಗುರುವಾರ ಸರಕಾರ ಮತ್ತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನೂತನ ಅಧ್ಯಕ್ಷೀಯ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಅದನ್ನು ಅನುಸರಿಸಿ ಇಂದು ಆಯೋಗವು ನೂತನ ಅಧ್ಯಕ್ಷೀಯ ಚುನಾವಣೆಯನ್ನು ಮಾರ್ಚ್ 13ರ ದಿನಾಂಕಕ್ಕೆ ನಿಗದಿಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ
ಯುಎಇ ತೆರಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ನ್ಯೂಯಾರ್ಕ್ ಸೂಪರ್ ಮಾರ್ಕೆಟ್ ನಲ್ಲಿ ಗುಂಡಿನ ದಾಳಿ:ಕನಿಷ್ಠ 10 ಮಂದಿ ಬಲಿ
ಉತ್ತರ ಕೊರಿಯಾದಲ್ಲಿ ಮಿತಿಮೀರಿದ ಕೋವಿಡ್; ಮೂರು ದಿನದಲ್ಲಿ 820,620 ಪ್ರಕರಣಗಳು ಪತ್ತೆ!
ಪಾಕಿಸ್ಥಾನ : ಸಿಖ್ ಸಮುದಾಯದ ವ್ಯಾಪಾರಿಗಳಿಬ್ಬರ ಬರ್ಬರ ಹತ್ಯೆ