ಇರಾಕ್ ಸೇನಾಪಡೆಯ ಮೇಲೆ ಮತ್ತೆ ಅಮೇರಿಕಾ ದಾಳಿ: ಆರು ಸಾವು
Team Udayavani, Jan 4, 2020, 9:37 AM IST
ಶುಕ್ರವಾರ ದಾಳಿಯ ಚಿತ್ರ
ಬಾಗ್ದಾದ್: ಇರಾನ್ ನ ಸೇನಾಧಿಕಾರಿಯನ್ನು ಬಾಗ್ದಾದ್ ನಲ್ಲಿ ರಾಕೆಟ್ ದಾಳಿಯಲ್ಲಿ ಕೊಂದ ಕೆಲವೇ ಗಂಟೆಗಳ ತರುವಾಯ ಅಮೇರಿಕಾ ಮತ್ತೆ ವಾಯುದಾಳಿ ನಡೆಸಿದೆ. ಶನಿವಾರ ಮುಂಜಾನೆ ಇರಾಕ್ ನ ಹಶೆಬ್ ಅಲ್ ಶಾಬಿ ಅರೆಸೇನಾ ಪಡೆಯ ವಾಹನಗಳ ಅಮೇರಿಕಾ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಶನಿವಾರ ಮುಂಜಾನೆ ನಡೆದ ದಾಳಿಯಿಂದ ಸುಮಾರು ಆರು ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ವಾಹನಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ನಿಖರವಾಗಿ ಯಾರನ್ನು ಕೊಲ್ಲುವ ಉದ್ದೇಶದಿಂದ ಈ ದಾಳಿ ಮಾಡಲಾಗಿದೆ ಎಂದು ಖಚಿತವಾಗಿಲ್ಲ.
ಶುಕ್ರವಾರ ಅಮೇರಿಕಾ ನಡೆಸಿದ ವಾಯುದಾಳಿಯಲ್ಲಿ ಸೇನಾಧಿಕಾರಿ ಖಾಸಿಂ ಸೊಲೇಮನಿ ಮತ್ತು ಅಬು ಮೆಹದಿ ಅಲ್ ಮುಹಂದಿಸ್ ಸೇರಿದಂತೆ ಹಲವರು ಸಾವನ್ನಪ್ಪಿದರು. ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆಗೆ ಸಿದ್ದತೆ ನಡೆದ ಬೆನ್ನಲ್ಲೆ ಅಮೇರಿಕಾದಿಂದ ಮತ್ತೊಂದು ದಾಳಿ ನಡೆದಿದೆ.
ಬಾಗ್ದಾದ್ ನಲ್ಲಿರುವ ಅಮೇರಿಕಾ ರಾಯಭಾರ ಕಚೇರಿಯ ಮೇಲೆ ಇತ್ತೀಚಿಗೆ ನಡೆದ ದಾಳಿಗೆ ಪ್ರತೀಕಾರವಾಗಿ ಅಮೇರಿಕಾ ಶುಕ್ರವಾರ ದಾಳಿ ನಡೆಸಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಈ ದಾಳಿ ನಡೆಸಿದೆ ಎಂದು ಅಮೇರಿಕಾ ರಕ್ಷಣಾ ಕಾರ್ಯಾಲಯ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ