ಶಿಬಿರಗಳೇ ಇರಲಿಲ್ಲ: ಪಾಕ್‌ ವಾದ

Team Udayavani, Mar 29, 2019, 6:01 AM IST

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್‌: ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ಭಾರತವು ದಾಳಿ ನಡೆಸಿದ ಪ್ರದೇಶಗಳಲ್ಲಿ ಯಾವುದೇ ಉಗ್ರರ ತರಬೇತಿ ಕ್ಯಾಂಪ್‌ಗ್ಳು ಇದ್ದಿದ್ದು ಕಂಡುಬಂದಿಲ್ಲ ಎಂದು ಪಾಕಿಸ್ಥಾನ ಮೊಂಡುವಾದ ಮಂಡಿಸಿದೆ.

ಪಾಕಿಸ್ಥಾನ ನೆಲದಲ್ಲಿದ್ದ 22 ಉಗ್ರರ ಕೇಂದ್ರಗಳನ್ನು ನಾಶ ಮಾಡಿರುವುದಾಗಿ ಬಾಲಾಕೋಟ್‌ ದಾಳಿಯ ನಂತರ ಭಾರತ ಹೇಳಿತ್ತು. ಆದರೆ, ನಮ್ಮ ತನಿಖೆಯಲ್ಲಿ ಅಂಥ ತರಬೇತಿ ಶಿಬಿರಗಳಿದ್ದ ಕುರುಹುಗಳು ಕಂಡುಬಂದಿಲ್ಲ. ಇದನ್ನು ಸಾಕ್ಷಾತ್ಕರಿಸಲು ಭಾರತದ ಅಧಿಕಾರಿಗಳು ದಾಳಿ ನಡೆದ ಸ್ಥಳಗಳ ಭೇಟಿಗಾಗಿ ಅನುಮತಿ ಕೋರಿದರೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದೇ ವೇಳೆ, ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ತಾನು ಬಂಧಿಸಿರುವ 54 ವ್ಯಕ್ತಿ ಗಳಿಗೂ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಪಾಕಿಸ್ಥಾನ, ಪುಲ್ವಾಮಾ ದಾಳಿಕೋ ರರ ಪತ್ತೆಗೆ ಭಾರತ ಮತ್ತಷ್ಟು ಸಾಕ್ಷಾಧಾರಗಳನ್ನು ಕೊಡಬೇಕು ಎಂದು ತಾಕೀತು ಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ