Udayavni Special

ವಿಶ್ವವಿಜ್ಞಾನದ ತ್ರಿಮೂರ್ತಿಗಳಿಗೆ ಭೌತ ನೊಬೆಲ್‌


Team Udayavani, Oct 9, 2019, 4:49 AM IST

s-13

ಸ್ಟಾಕ್‌ಹೋಂ: ಬ್ರಹ್ಮಾಂಡದಲ್ಲಿ ಭೂಮಿಯ ಅಸ್ತಿತ್ವದ ಕುರಿತು ಹೆಚ್ಚಿನ ಮಾಹಿತಿ ಒದಗಿಸುವಲ್ಲಿ ಕೊಡುಗೆ ನೀಡಿರುವ ವಿಶ್ವವಿಜ್ಞಾನದ ತ್ರಿಮೂರ್ತಿಗಳಿಗೆ ಪ್ರಸಕ್ತ ಸಾಲಿನ ಭೌತ ನೊಬೆಲ್‌ ಸಂದಿದೆ.

ಕೆನಡಾ-ಅಮೆರಿಕನ್‌ ಕಾಸ್ಮಾಲಜಿಸ್ಟ್‌ ಜೇಮ್ಸ್‌ ಪೀಬಲ್ಸ್‌ ಮತ್ತು ಸ್ವಿಸ್‌ ಖಗೋಳ ವಿಜ್ಞಾನಿಗಳಾದ ಮೈಕಲ್‌ ಮೇಯರ್‌ ಮತ್ತು ಡಿಡಿಯೆರ್‌ ಕ್ವೆಲೊಸ್‌ ಅವರು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಬಿಗ್‌ ಬ್ಯಾಂಗ್‌(ಮಹಾಸ್ಫೋಟ) ಬಳಿಕ ಬ್ರಹ್ಮಾಂಡವು ಹೇಗೆ ರೂಪುಗೊಂಡಿತು ಎಂಬುದನ್ನು ಅರ್ಥಮಾಡಿಸಿಕೊಡುವಂಥ ಸಂಶೋಧನೆ ಗಾಗಿ ಪೀಬಲ್ಸ್‌ ಅವರಿಗೆ ಈ ಪ್ರಶಸ್ತಿ ಸಂದಿದೆ.

ಇನ್ನು ಮೇಯರ್‌ ಹಾಗೂ ಕ್ವೆಲೊಸ್‌ ಅವರಿಗೆ ಸೌರವ್ಯವಸ್ಥೆಯ ಹೊರಗೆ ಇರುವಂಥ ಗೃಹ (ಎಕ್ಸೋಪ್ಲಾನೆಟ್‌)ವೊಂದನ್ನು ಆವಿಷ್ಕರಿ ಸಿದ್ದಕ್ಕಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಇವರ ಆವಿಷ್ಕಾರಗಳು ವಿಶ್ವದ ಕುರಿತ ನಮ್ಮ ಪರಿಕಲ್ಪನೆಗಳನ್ನೇ ಬದಲಾಯಿಸಿದವು ಎಂದು ಜೂರಿ ಹೇಳಿದೆ.

ಭೌತ ನೊಬೆಲ್‌ ಪ್ರಶಸ್ತಿಯು ಚಿನ್ನದ ಪದಕ, ಡಿಪ್ಲೊಮಾ ಮತ್ತು 9.14 ಲಕ್ಷ ಡಾಲರ್‌(6.50 ಕೋಟಿ ರೂ.) ನಗದು ಪುರಸ್ಕಾರವನ್ನು ಒಳಗೊಂಡಿದೆ.

ಡಿ. 10ರಂದು ಪ್ರದಾನ
ಡಿ. 10ರಂದು ಸ್ಟಾಕ್‌ಹೋಂನಲ್ಲಿ ನಡೆಯುವ ಸಮಾರಂಭದಲ್ಲಿ ನೊಬೆಲ್‌ ಪ್ರದಾನ ಮಾಡಲಾಗುತ್ತದೆ.

ಮೂವರಿಗೆ ವೈದ್ಯ ನೊಬೆಲ್‌
ಕೋಶಗಳು ಹೇಗೆ ಆಮ್ಲಜನಕದ ಲಭ್ಯತೆಯನ್ನು ಗ್ರಹಿಸಿ, ಅದನ್ನು ಅಳವಡಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳಾದ ವಿಲಿಯಂ ಜೆ. ಕೇಲಿನ್‌ ಜೂನಿಯರ್‌, ಪೀಟರ್‌ ಜೆ. ರ್ಯಾಟ್‌ಕ್ಲಿಫ್ ಮತ್ತು ಗ್ರೆಗ್‌ ಎಲ್‌. ಸೆಮೆನಾl ಅವರು ಈ ಬಾರಿಯ ವೈದ್ಯ ನೊಬೆಲ್‌ ಅನ್ನು ಹಂಚಿಕೊಂಡಿದ್ದಾರೆ.

ಆಮ್ಲಜನಕದ ಮಟ್ಟದಲ್ಲಿ ಆಗುವ ಬದಲಾವಣೆಗಳಿಗೂ ಕೋಶಗಳು ಸ್ಪಂದಿಸುವಂತೆ ಮಾಡುವ ಆನುವಂಶಿಕ ಮೆಕ್ಯಾನಿಸಂ ಕುರಿತು ಈ ಮೂವರು ಅಧ್ಯಯನ ನಡೆಸಿದ್ದಾರೆ. ಇವರ ಸಂಶೋಧನೆಯಿಂದಾಗಿ ಕ್ಯಾನ್ಸರ್‌, ಅನೀಮಿಯಾ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ತೀರ್ಪುಗಾರರ ತಂಡ ಅಭಿಪ್ರಾಯಪಟ್ಟಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

‘ಹಳ್ಳಿ ಹುಡ್ಗಿ’ ಮೆಬಿನಾ ರಸ್ತೆ ಅಪಘಾತಕ್ಕೆ ಬಲಿ

‘ಹಳ್ಳಿ ಹುಡ್ಗಿ’ ಮೆಬಿನಾ ರಸ್ತೆ ಅಪಘಾತಕ್ಕೆ ಬಲಿ

ಹಳೇ ವೈಷಮ್ಯಕ್ಕೆ ಮೂವರು ಬಲಿ

ಹಳೇ ವೈಷಮ್ಯಕ್ಕೆ ಮೂವರು ಬಲಿ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

speed-inter-net

ಜಗತ್ತಿನ ಅತೀ ವೇಗದ ಇಂಟರ್ ನೆಟ್ ಡೇಟಾ ದಾಖಲೆ: ಸೆಕೆಂಡ್ ನಲ್ಲಿ ಸಾವಿರ ಸಿನಿಮಾ ಡೌನ್ ಲೋಡ್ !

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಭಕ್ತರಿಗೆ ಅವಕಾಶ: ಕೋಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಅಕ್ರಮ ವಲಸಿಗರಿಗೆ ವರದಾನವಾದ ಕೋವಿಡ್‌

ಅಕ್ರಮ ವಲಸಿಗರಿಗೆ ವರದಾನವಾದ ಕೋವಿಡ್‌

ಮೆಕ್ಸಿಕೋದಲ್ಲಿ 10 ಲಕ್ಷ ಉದ್ಯೋಗ ನಷ್ಟ

ಮೆಕ್ಸಿಕೋದಲ್ಲಿ 10 ಲಕ್ಷ ಉದ್ಯೋಗ ನಷ್ಟ

ಟೋಕಿಯೊ: ಕೋವಿಡ್‌ ತುರ್ತು ಸ್ಥಿತಿ ಹಿಂದೆಗೆತ

ಟೋಕಿಯೊ: ಕೋವಿಡ್‌ ತುರ್ತು ಸ್ಥಿತಿ ಹಿಂದೆಗೆತ

ಮರೆಯಾಯ್ತು ಸ್ಟಾನ್ಸ್‌ ಡೋನಟ್‌ ಸವಿ

ಮರೆಯಾಯ್ತು ಸ್ಟಾನ್ಸ್‌ ಡೋನಟ್‌ ಸವಿ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

suri direct abhi

ಅಭಿಷೇಕ್‌ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶನ?

saalman-3d

ಆರು ಭಾಷೆಗಳಲ್ಲಿ 3ಡಿ ಚಿತ್ರ

ram sur joll

ಜಾಲಿ ಹುಡುಗರ ರಹಸ್ಯ ಪಯಣ

week aanth

ಅಮೆಜಾನ್‌ನಲ್ಲಿ ಅನಂತ್‌ನಾಗ್‌ ಚಿತ್ರ

single act

ಲಾಕ್‌ಡೌನ್‌ ಇದು ಸಿಂಗಲ್‌ ಆ್ಯಕ್ಟರ್‌ ಸಿನಿಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.