ಶಾಂತಿಯ ಇತಿಹಾಸ ಬರೆದ ಕೊರಿಯಾ

Team Udayavani, Apr 28, 2018, 6:00 AM IST

19.jpg

ಗೊಯಾಂಗ್‌ (ದಕ್ಷಿಣ ಕೊರಿಯಾ): ಸದಾ ಕಾಲ ಯುದ್ಧ, ದ್ವೇಷ, ಸಂಘರ್ಷ, ಬೆದರಿಕೆಗಳನ್ನೇ ಕಂಡಿದ್ದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಶುಕ್ರವಾರ ಶಾಂತಿಯ ಬೆಳಕೊಂದು ಮೂಡಿದೆ. ಎರಡೂ ದೇಶಗಳ ನಾಯಕರು ನಡೆಸಿದ ಐತಿಹಾಸಿಕ ಮಾತುಕತೆ ಫ‌ಲಪ್ರದವಾಗಿದ್ದು, ಕೊರಿಯಾ ಭೂಪ್ರದೇಶವನ್ನು ಅಣ್ವಸ್ತ್ರರಹಿತ ಸ್ಥಳವನ್ನಾಗಿ ಪರಿವರ್ತಿಸುತ್ತೇವೆ ಹಾಗೂ ಅಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ನೋಡಿಕೊಳ್ಳುತ್ತೇವೆ ಎಂದು ಉಭಯ ನಾಯಕರು ಶಪಥ ಮಾಡಿದ್ದಾರೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ನಿಶ್ಶಸ್ತ್ರೀಕರಣ ಸ್ಥಳ (ಮಿಲಿಟರಿ ಡಿಮಾರ್ಕೇಷನ್‌ ಲೈನ್‌) ಪಾನ್‌ಮುನ್‌ಜಾಮ್‌ನಲ್ಲಿ 2007ರ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ-ಇನ್‌ ಭೇಟಿಯಾಗಿದ್ದಾರೆ. ಎರಡೂ ರಾಷ್ಟ್ರಗಳ ನಡುವೆ ಇನ್ನು ಯುದ್ಧ ನಡೆಯುವುದಿಲ್ಲ. ಎಲ್ಲಾ ಪರಮಾಣು ಶಸ್ತ್ರಗಳನ್ನು ನಾಶಗೊಳಿಸಿ ಒಟ್ಟೂ ಕೊರಿಯಾ ಭೂಪ್ರದೇಶವನ್ನು ಅಣ್ವಸ್ತ್ರರಹಿತ ಸ್ಥಳವನ್ನಾಗಿ ಮಾಡುತ್ತೇವೆ ಎಂದು ಘೋಷಣೆಯನ್ನೂ ಮಾಡಿದ್ದಾರೆ. 1953ರಲ್ಲಿ  ಎರಡು ದೇಶಗಳ ನಡುವೆ ಯುದ್ಧ ಮುಕ್ತಾಯವಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ನಾಯಕ ಎಂಬ ಹೆಗ್ಗಳಿಕೆಗೂ ಉ.ಕೊರಿಯಾ ಅಧ್ಯಕ್ಷ ಕಿಮ್‌ ಪಾತ್ರರಾಗಿದ್ದಾರೆ. 

ಭಾವುಕನಾದೆ: ಪಾನ್‌ಮುನ್‌ಜಾಮ್‌ ಘೋಷಣೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಕಿಮ್‌, ದಕ್ಷಿಣ ಕೊರಿಯಾ ಪ್ರದೇಶಕ್ಕೆ ಕಾಲಿರಿಸುತ್ತಿದ್ದಂತೆಯೇ ಭಾವುಕನಾದೆ ಎಂದು ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಬಾಂಧವ್ಯದ ಹೊಸ ಅಧ್ಯಾಯ ಆರಂಭಿಸಲು ಬಂದಿದ್ದೇನೆ. ಶುಕ್ರವಾರ ಕೈಗೊಂಡ ಮಹತ್ವದ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಜನರು ಯುದ್ಧದ ಭೀತಿಯಿಲ್ಲದೆ ಶಾಂತಿಯಿಂದ ಇರಲು ಅವಕಾಶ ಮಾಡಿಕೊಡಲಿದೆ. ಕೊರಿಯಾ ಪರ್ಯಾಯ ದ್ವೀಪ ಅಭಿವೃದ್ಧಿ ಸಾಧಿಸಲು ನೆರವಾಗಲಿದೆ’ ಎಂದು ಹೇಳಿದ್ದಾರೆ.

ಆಲಿಂಗಿಸಿಕೊಂಡ ಕಿಮ್‌-ಮೂನ್‌: ಐತಿಹಾಸಿಕ ಜಂಟಿ ಹೇಳಿಕೆಗೆ ಸಹಿ ಹಾಕಿದ ಬಳಿಕ ಇಬ್ಬರು ನಾಯಕರು ಒಬ್ಬರೊನ್ನೊಬ್ಬರು ಆಲಿಂಗಿಸಿಕೊಂಡರು. ಜತೆಗೆ “ಹಿಂದಿನ ಯಾವುದೇ ಅನಪೇಕ್ಷಿತ ಘಟನೆಗಳು ಮರುಕಳಿಸಬಾರದು’ ಎಂದು ವಾಗ್ಧಾನ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಉತ್ತರ ಕೊರಿಯಾಕ್ಕೆ ಬನ್ನಿ ಎಂದು ಮೂನ್‌ಗೆ ಕಿಮ್‌ ಆಹ್ವಾನವಿತ್ತರು. ಅದಕ್ಕೆ ಉತ್ತರಿಸಿದ ಅವರು ಈ ವರ್ಷದಲ್ಲಿಯೇ ಬರುವೆ ಎಂದರು. ಶುಕ್ರವಾರ ಎರಡು ಅವಧಿಗಳಲ್ಲಿ ಐತಿಹಾಸಿಕ ಮಾತುಕತೆಗಳು ನಡೆದವು. ಮೊದಲ ಅವಧಿಯಲ್ಲಿ ಒಂದು ಗಂಟೆ ನಲವತ್ತು ನಿಮಿಷಗಳ ಕಾಲ ಮಾತುಕತೆ ನಡೆದವು. 

ಮುನ್ನುಡಿ: ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಭೇಟಿ ಮೊದಲೇ ಈ ಐತಿಹಾಸಿಕ ಭೇಟಿ ನಡೆದಿದೆ. ಶುಕ್ರವಾರದ ಮಾತುಕತೆಯನ್ನು ಟ್ರಂಪ್‌ ಕೂಡ ಸ್ವಾಗತಿಸಿದ್ದಾರೆ.

ಚೀನಾದ ಅಭಿನಂದನೆ: ಎರಡೂ ದೇಶಗಳ ಅಧ್ಯಕ್ಷರು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಉತ್ತರ ಕೊರಿಯಾದ ಪರಮಾಪ್ತ ದೇಶ ಚೀನಾ ಅಭಿನಂದನೆ ಸಲ್ಲಿಸಿದೆ. ಎರಡೂ ಪ್ರದೇಶಗಳ ಸಮಾನ ಹಿತಾಸಕ್ತಿ ಇದುವೇ ಆಗಿದೆ. ಅಂತಾರಾಷ್ಟ್ರೀಯ ಸಮುದಾಯವೂ ಈ ಭೇಟಿಯನ್ನೇ ಬಯಸಿತ್ತು ಎಂದಿದೆ.

ಎರಡು ಮಾತುಕತೆಗಳು: 2000, 2007ರಲ್ಲಿ ಎರಡು ಬಾರಿ ಪಾಂಗ್‌ಯಾಂಗ್‌ನಲ್ಲಿ ಕೊರಿಯಾಗಳ ನಡುವೆ ಮಾತುಕತೆ ನಡೆದಿದ್ದವು. ಆದರೂ, ಅವುಗಳು ಯಾವುದೇ ಫ‌ಲ ಬೀರಿರಲಿಲ್ಲ.

ಪೈನ್‌ ಸಸಿಗೆ ಎರಡೂ ದೇಶಗಳ ಮಣ್ಣು, ನೀರು
ಐತಿಹಾಸಿಕ ಭೇಟಿಯ ನೆನಪಿಗಾಗಿ ಕಿಮ್‌ ಮತ್ತು ಮೂನ್‌ ಎರಡೂ ದೇಶಗಳ ಮಣ್ಣು  ಸೇರಿಸಿ ಪನ್‌ಮುನ್‌ಜಾಮ್‌ನಲ್ಲಿ ಪೈನ್‌ ಸಸಿಯನ್ನು ನೆಟ್ಟರು. ಅದಕ್ಕೆ ಎರಡೂ ದೇಶಗಳಿಂದ ತಂದಿದ್ದ ನೀರನ್ನು ಎರೆಯ ಲಾಯಿತು. ಜತೆಗೆ “ಶಾಂತಿ ಮತ್ತು ಅಭಿವೃದ್ಧಿಯನ್ನು ಇಲ್ಲಿ ನೆಡಲಾಗಿದೆ’ ಎಂಬ ಫ‌ಲಕವನ್ನೂ ಅನಾವರಣ ಮಾಡಲಾಯಿತು.

ಬರುವುದರಲ್ಲಿ ತೊಂದರೆಯಾಯಿತೇ?
ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಆಗಮನಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ- ಇನ್‌ ಕಾಯುತ್ತಿದ್ದರು. ಉತ್ತರ ಕೊರಿಯಾ ಗಡಿ ಪ್ರದೇಶದಿಂದ ಆಗಮಿಸು ತ್ತಿದ್ದಂತೆ ಮೊದಲು ಮಾತನಾಡಿದ್ದು ಕಿಮ್‌. ಅವರ ಸಂಭಾಷಣೆ ಹೀಗಿತ್ತು:

ಕಿಮ್‌: ನಿಮ್ಮನ್ನು ಭೇಟಿಯಾಗುತ್ತಿರುವುದು ತುಂಬ ಸಂತೋಷ ತಂದಿದೆ. 
ಮೂನ್‌: ನಿಮಗೆ ಬರುವುದರಲ್ಲಿ ಏನಾದರೂ ತೊಂದರೆಯಾಯಿತೇ?
ಕಿಮ್‌: ಹಾಗೇನೂ ಇಲ್ಲ.
ಮೂನ್‌: ನಿಮ್ಮನ್ನು ಭೇಟಿ ಮಾಡಿದ್ದು ನನಗೂ ಸಂತೋಷ ತಂದಿದೆ. 
ಕಿಮ್‌: ಪನ್‌ಮುನ್‌ಜಾಮ್‌ನ ನಿಶ್ಶಸ್ತ್ರ ಪ್ರದೇಶಕ್ಕೆ ನಿಮ್ಮ ರಾಜಧಾನಿಯಿಂದ ಇಷ್ಟು ದೂರಕ್ಕೆ ಬಂದು ನನ್ನನ್ನು ಸ್ವಾಗತಿಸಿದ್ದೀರಿ. ಮೈ ರೋಮಾಂಚನವಾಗುವ ಹಾಗೂ ಐತಿಹಾಸಿಕ ಕ್ಷಣಗಳನ್ನು ನೀವು ನಿರ್ಮಿಸಿದ್ದೀರಿ. 
ಮೂನ್‌: ನಮ್ಮಲ್ಲಿಗೆ ಬರಬೇಕು ಎಂದು ನೀವು ಧೈರ್ಯವಾಗಿ ಕೈಗೊಂಡ ನಿರ್ಧಾರವೇ ನನ್ನನ್ನು ಇಲ್ಲಿಯ ವರೆಗೆ ಬರುವಂತೆ ಮಾಡಿತು.

ಜಂಟಿ ಹೇಳಿಕೆ ಮುಖ್ಯಾಂಶಗಳು
ಎರಡು ದೇಶಗಳ ನಡುವಿನ ಹಗೆತನವನ್ನು ಕೊನೆಗಾಣಿಸುವುದು 
ಪರಸ್ಪರ ಪ್ರಚೋದನಾತ್ಮಕ ಪ್ರಸಾರಗಳನ್ನು ನಿಲ್ಲಿಸಿ ನಿಶ್ಶಸ್ತ್ರ ಪ್ರದೇಶವನ್ನು ಶಾಂತಿಯುತ ಪ್ರದೇಶವನ್ನಾಗಿಸುವುದು
ಶಸ್ತ್ರಾಸ್ತ್ರ ಸಹಿತ ಸೇನೆ ಜಮಾವಣೆ ಮೂಲಕ ಉದ್ವಿಗ್ನ ಸ್ಥಿತಿ ಉಂಟಾಗುವುದರ ಮೇಲೆ ತಡೆ
ಅಮೆರಿಕ, ಚೀನಾವನ್ನು ಒಳಗೊಂಡ ಚತುಷ್ಪ³ಕ್ಷೀಯ ಮಾತುಕತೆ
ದಶಕದ ಹಿಂದೆ ಯುದ್ಧ ನಡೆಯುವುದಕ್ಕೆ ಮುನ್ನ ದೇಶ ತೊರೆದಿದ್ದ ಕುಟುಂಬಗಳ ಮರು ಸೇರ್ಪಡೆ
ಗಡಿ ಗುಂಟ ಅತ್ಯಾಧುನಿಕ ರೀತಿಯಲ್ಲಿ ರೈಲು, ರಸ್ತೆ ಸಂಪ ರ್ಕಗಳ ಮರು ನಿರ್ಮಾಣ.

ಮುಂದಿನ ಏಷ್ಯನ್‌ ಗೇಮ್ಸ್‌ ಸಹಿತ ವಿಶ್ವದಲ್ಲಿ ನಡೆಯವಿರುವ ಕ್ರೀಡಾ ಕೂಟಗಳಲ್ಲಿ ಜಂಟಿಯಾಗಿ ಭಾಗವಹಿಸುವಿಕೆ.

ಹಲವು ವರ್ಷಗಳ ಕಾಲ ಕ್ಷಿಪಣಿ ಪ್ರಯೋಗ, ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರು ಭೇಟಿಯಾಗುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಟಾಪ್ ನ್ಯೂಸ್

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.