ವದಂತಿಗಳಿಗೆ ತೆರೆ:ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಕೊನೆಗೂ ಸಾರ್ವಜನಿಕವಾಗಿ ಪ್ರತ್ಯಕ್ಷ
Team Udayavani, May 2, 2020, 8:20 AM IST
ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು, ಸಾವನ್ನಪ್ಪಿರುವ ಸಾಧ್ಯತೆಯೂ ಇದೆ ಎಂಬ ಅಲ್ಲಿನ ಮಾಧ್ಯಮಗಳ ನಿರಂತರ ವರದಿಯ ಬೆನ್ನಲ್ಲೇ ಇದೀಗ ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಈ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ಕೆಲ ದಿನಗಳಿಂದ ಕಿಮ್ ಜಾಂಗ್ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಅವರಿಗೆ ಕೋವಿಡ್ 19 ವೈರಸ್ ಹಬ್ಬಿರುವುದೇ ಕಾರಣ ಎಂಬ ವರದಿಗಳು ಬಿತ್ತರಗೊಂಡಿದ್ದವು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಚೀನಾದ ವೈದ್ಯರೊಬ್ಬರಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೂಡ ಚೀನಾದ ಕೆಲವು ವಾಹಿನಿಗಳು ಸುದ್ದಿ ಬಿತ್ತರಿಸಿದ್ದವು.
ಆದರೇ ಶುಕ್ರವಾರ ನಡೆದ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೆಸಿಎನ್ಎ ಫರ್ಟಿಲೈಸರ್ ಫ್ಯಾಕ್ಟರಿಯ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ತಮ್ಮ ಸಹೋದರಿ ಜೊತೆ ಕಿಮ್ ಜಾಂಗ್ ಭಾಗವಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ ಎಂದು ಉತ್ತರ ಕೊರಿಯಾ ಅಧಿಕಾರಿಗಳು ಮೊದಲೇ ಮಾಹಿತಿ ನೀಡಿದ್ದರು. ಇದೀಗ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಾವಿನ ವದಂತಿಗಳಿಗೆ ಕಿಮ್ ಜಾಂಗ್ ಖುದ್ದು ತೆರೆ ಎಳೆದಿದ್ದಾರೆ.
ಏ. 11ರಂದು ವರ್ಕರ್ಸ್ ಪಾರ್ಟಿ ಸಭೆಯೊಂದರಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಎಲ್ಲೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಕೊರಿಯಾದ ಬೃಹತ್ ಸಮಾರಂಭವೊಂದರಲ್ಲಿ ಕಿಮ್ ಜಾಂಗ್ ಅತಿಥಿಯಾಗಿ ಆಗಮಿಸಿ, ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ