ರೇಡಿಯೋ ಎಚ್ಚರಿಕೆ ಕೇಳಿ ಬೆಚ್ಚಿಬಿದ್ದ ಗುವಾಮ್!
Team Udayavani, Aug 16, 2017, 8:32 AM IST
ಹಗಾಟ್ನ (ಗುವಾಮ್): ರೆಡ್ ಅಲರ್ಟ್! “ಉತ್ತರ ಕೊರಿಯಾ ದಾಳಿಗೆ ಸಿದ್ಧವಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಕ್ಷಿಪಣಿಗಳು ಬಂದು ನಮ್ಮ ನೆಲದಲ್ಲಿ ಸಿಡಿಯಲಿವೆ. ಗುವಾಮ್ ನಾಗರಿಕರೇ ಎಚ್ಚರ… ಸುರಕ್ಷಿತ ಸ್ಥಳಗಳಿಗೆ ತೆರಳಿ ಪ್ರಾಣ ರಕ್ಷಿಸಿಕೊಳ್ಳಿ!’ ಹೀಗೊಂದು ಎಚ್ಚರಿಕೆ ಸಂದೇಶ ನೀಡಿದ ಗುವಾಮ್ನ ಎರಡು ರೇಡಿಯೋಗಳು ಅಲ್ಲಿನ ನಾಗರಿಕರನ್ನು ಬೆಚ್ಚಿ ಬೀಳಿಸಿವೆ.
ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಈಗಾಗಲೇ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಸಲಿ ಯುದ್ಧಕ್ಕೆ ಪೂರ್ವಭಾವಿಯಾಗಿ ಎರಡೂ ರಾಷ್ಟ್ರಗಳ ಮುಖಂಡರು ವಾಗ್ಯುದ್ಧ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಅಲ್ಲಿನ ಎರಡು ರೇಡಿಯೋ ಸ್ಟೇಷನ್ಗಳು ತಡರಾತ್ರಿ 12:25ರ ಹೊತ್ತಿಗೆ “ಉತ್ತರ ಕೊರಿಯಾ ಗುವಾಮ್ ಮೇಲೆ ದಾಳಿ ಆರಂಭಿಸಿದೆ’ ಎಂದು ಸಂದೇಶ ಬಿತ್ತರಿಸಿವೆ.
ಇದನ್ನು ಕೇಳಿ ವಿಚಲಿತರಾದ ನಾಗರಿಕರು ಕೂಡಲೇ ಪೊಲೀಸರಿಗೆ ಕರೆ ಮಾಡಲಾರಂಭಿಸಿದ್ದಾರೆ. ಕರೆ ಸ್ವೀಕರಿಸಿ ಎಲ್ಲರನ್ನೂ ಸಮಾಧಾನ ಪಡಿಸುವಷ್ಟರಲ್ಲಿ ಪೊಲೀಸರು ಸುಸ್ತಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ