Udayavni Special

ಭಾರತದ ವಿರುದ್ಧ ಒಂದಾದ ಉಗ್ರಗಾಮಿ ಸಂಘಟನೆಗಳು


Team Udayavani, Aug 8, 2017, 6:25 AM IST

terrorist-08.jpg

ಲಾಹೋರ್‌/ಬೀಜಿಂಗ್‌: ಕಾಶ್ಮೀರದಲ್ಲಿ ಉಗ್ರವಾದವನ್ನು ಮಟ್ಟಹಾಕಲು ಭದ್ರತಾ ಪಡೆಗಳು ನಿರಂತರ ಯತ್ನ ನಡೆಸುತ್ತಿರುವಂತೆಯೇ, ಅತ್ತ ಪಾಕ್‌ ಆಕ್ರಮಿತ ಕಾಶ್ಮೀರ ನಿಧಾನಕ್ಕೆ ಚೀನ ಆಕ್ರಮಿತ ಕಾಶ್ಮೀರವಾಗುವತ್ತ ಮುನ್ನಡೆದಿದೆ! ಆತಂಕಕಾರಿ ವಿಚಾರವೆಂದರೆ, ಭಾರತ ವಿರುದ್ಧ “ಜಿಹಾದ್‌’ಗೆ 30 ಭಯೋತ್ಪಾದಕ ಸಂಘಟನೆಗಳು ಒಂದಾಗಿದ್ದು, ಪರೋಕ್ಷವಾಗಿ ಪಾಕ್‌ನೊಂದಿಗೆ ಚೀನ ಸಿಪೆಕ್‌ ಹೆಸರಲ್ಲಿ ಕೈಜೋಡಿಸಿದೆ ಎಂಬ ಅಂಶ ಬಯಲಾಗಿದೆ. 

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚೀನ ನಡೆಸುತ್ತಿರುವ ಪಾಕ್‌-ಚೀನ ಆರ್ಥಿಕ ಕಾರಿಡಾರ್‌ ಯೋಜನೆಗಾಗಿ ಇಲ್ಲಿ ರಸ್ತೆ, ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿಗಳಿಗೆ ಪಾಕ್‌ ಬಹುತೇಕ ಭಾಗವನ್ನು ಚೀನಕ್ಕೆ ಒದಗಿಸಿದ್ದು, ಅಲ್ಲೆಲ್ಲ ಚೀನದ ಕಂಪನಿಗಳು, ಚೀನ ಸೇನೆ (ಪಿಎಲ್‌ಎ) ಉಪಸ್ಥಿತಿ ಜೋರಾಗಿದೆ.

ಈ ಬಗ್ಗೆ ತನಿಖಾ ವರದಿಯನ್ನು ಇಂಡಿಯಾ ಟುಡೇ ಪ್ರಕಟಿಸಿದ್ದು, ಪಿಒಕೆಯಲ್ಲಿ ಜಿಹಾದ್‌ಗೆ 30 ಉಗ್ರಗಾಮಿ-ಧಾರ್ಮಿಕ ಸಂಘಟನೆಗಳು ಒಂದಾಗಿರುವ ಅಂಶವನ್ನು ಬಹಿರಂಗಪಡಿಸಿದೆ. ಈ ಬಗ್ಗೆ ಲಾಹೋರ್‌ನಲ್ಲಿ ದೈಫಾ-ಇ-ಪಾಕಿಸ್ತಾನ್‌ ಹೆಸರಿನಲ್ಲಿ ರ್ಯಾಲಿಯೊಂದನ್ನು ಸಂಘಟಿಸಲಾಗಿದ್ದು, ಕಾಶ್ಮೀರದಲ್ಲಿ ಉಗ್ರವಾದ ತೀವ್ರಗೊಳಿಸಲು ಲಷ್ಕರ್‌ ಎ ತೋಯ್ಬಾ, ಜೈಶ್‌ ಎ ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದೀನ್‌, ಜಮಾಯತ್‌ ಉಲ್‌ ಮುಜಾಹಿದೀನ್‌ಗಳು ತೀರ್ಮಾನಕ್ಕೆ ಬಂದಿವೆ. ಜೊತೆಗೆ ಗಿಲಿYಟ್‌-ಬಾಲ್ಟಿಸ್ತಾನ್‌ ಪ್ರದೇಶದಲ್ಲಿ ಚೀನ ವ್ಯಾಪಕವಾಗಿ ಸೇನೆ ನಿಯೋಜಿಸಿದೆ. ಇದು ಕಾಶ್ಮೀರ ಉತ್ತರ ಭಾಗದಲ್ಲಿ ಭಾರತವನ್ನು ಹಣಿವ ಯತ್ನ ಎನ್ನಲಾಗಿದೆ. ಇನ್ನು, ಸಿಪೆಕ್‌ ವಿರುದ್ಧ, ಪಾಕ್‌ ವಿರುದ್ಧ ದನಿ ಎತ್ತಿದರೆ ಹಿಂಸಿಸುವ, ನಿರ್ದಾಕ್ಷಿಣ್ಯವಾಗಿ ಜೈಲಿಗೆ ಕಳಿಸುವ ಕೆಲಸ ಮಾಡಲಾಗುತ್ತದೆ. ಅಕ್ಸಾಯ್‌ ಚಿನ್‌ ಅನ್ನು ಕೂಡ ಪಾಕ್‌ ಚೀನಕ್ಕೆ ನೀಡಿದ್ದು, ಭಾರತವನ್ನು ಮಣಿಸಲು ನೆರವು ಬಯಸಿದೆ ಎನ್ನಲಾಗಿದೆ. 

ಪಾಕ್‌ ಮೂಲದ ಲಷ್ಕರ್‌ ಉಗ್ರ ಹತ್ಯೆ
ಶ್ರೀನಗರ
: ಇತ್ತೀಚೆಗೆ ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಿದ್ದ, ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನನ್ನು ಭದ್ರತಾ ಪಡೆಗಳು ಗುಂಡಿಟ್ಟು ಹತ್ಯೆ ಮಾಡಿವೆ. ಈ ಮೂಲಕ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಉಗ್ರ ಬೇಟೆ ಮುಂದುವರಿದಿದೆ.  ಮೃತ ಉಗ್ರನನ್ನು ಉಮರ್‌ ಎಂದು ಗುರುತಿಸಲಾಗಿದ್ದು, ಈತ ಪಾಕಿಸ್ತಾನ ಮೂಲದನು ಎನ್ನಲಾಗಿದೆ. ಈತ ಕಾಶ್ಮೀರದಲ್ಲಿನ ಇಸ್ಲಾಯಿಲ್‌ ಗ್ರೂಪ್‌ ಆಫ್ ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ. ಉಗ್ರರು ಅಡಗಿದ್ದ ಖಚಿತ ಮಾಹಿತಿ ಮೇರೆಗೆ ಸಂಬೋರಾ ಗ್ರಾಮದಲ್ಲಿ ಭದ್ರತಾ ಪಡೆಗಳು ರವಿವಾರ ರಾತ್ರಿ ಸುತ್ತುವರಿದಿದ್ದು, ಶೋಧ ಕಾರ್ಯ ನಡೆಸಿದ್ದವು. ಈ ವೇಳೆ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಉಗ್ರ ಹತನಾಗಿದ್ದಾನೆ.

ಸೇನೆ ಹಿಂದೆಗೆದು ಯುದ್ಧ ತಪ್ಪಿಸಿ: ಚೀನ ಸೇನೆ
ಡೋಕ್ಲಾಂನಿಂದ ಭಾರತ ಕೂಡಲೇ ಸೇನೆಯನ್ನು ಹಿಂದೆಗೆದು ಯುದ್ಧವನ್ನು ತಪ್ಪಿಸಲಿ ಎಂದು ಚೀನದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಹೇಳಿದೆ. ಈ ಮೂಲಕ ನಾನಾ ವಿಧದ ಒತ್ತಡ ತಂತ್ರಗಳನ್ನು ಮುಂದುವರಿಸಿದೆ. ಚೀನ ಸರಕಾರಿ ಪ್ರಾಯೋಜಿತ ಪ್ರವಾಸ ನಡೆಸುತ್ತಿರುವ ಭಾರತೀಯ ಪತ್ರಕರ್ತರ ತಂಡದೊಂದಿಗೆ ಮಾಧ್ಯಮಗೋಷ್ಠಿ ನಡೆಸಿದ ಚೀನ ಸೇನೆ, ಡೋಕ್ಲಾಂ ವಿಚಾರದಲ್ಲಿ ತನ್ನ ಉದ್ದೇಶ ಪೂರ್ವಕ ಪ್ರಚಾರಕಾರ್ಯವನ್ನು ನಡೆಸಿದೆ. 

ಚೀನ ಸೇನೆಯ ಹಿರಿಯ ಕರ್ನಲ್‌ ಲಿ ಲಿ ಮಾತನಾಡಿ, “ಚೀನದ ಗಡಿಯೊಳಕ್ಕೆ ನುಗ್ಗಿದ ಭಾರತೀಯ ಸೇನೆ ಮಾಡಿದ್ದೇನು? ಎಂದು ಪ್ರಶ್ನಿಸಿದರು. ಚೀನದ ಸೈನಿಕ ಏನು ಚಿಂತಿಸುತ್ತಾನೆ ಎಂದು ನೀವು ವರದಿ ಮಾಡಬಹುದು. ನಾನು ಒಬ್ಬ ಸೈನಿಕ. ನನ್ನ ದೇಶದ ಗಡಿ ಸಾರ್ವಭೌಮತೆ ಕಾಯ್ದುಕೊಳ್ಳಲು ಗರಿಷ್ಠ ಯತ್ನ ಮಾಡುತ್ತೇನೆ’ ಎಂದು ಹೇಳಿದರು. ಇದರೊಂದಿಗೆ, “ಭಾರತೀಯ ಸೇನೆ ಯಾವ ಕ್ರಮ ಕೈಗೊಳ್ಳುತ್ತದೋ, ಅದಕ್ಕೆ ಪ್ರತಿಯಾಗಿ ನಾವೂ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದರೊಂದಿಗೆ ಚೀನ ಸೇನೆ ಮಾಧ್ಯಮ ತಂಡದ ಎದುರು ವಿವಿಧ ಯುದ್ಧ ಕೌಶಲ್ಯವನ್ನೂ ಪ್ರದರ್ಶಿಸಿತು. 

ಚೀನ ಬಗ್ಗೆ ತಪ್ಪಾಗಿ ಅರ್ಥೈಸಬೇಡಿ: ಇದೇ ವೇಳೆ ಚೀನದ ಸರಕಾರಿ ಸ್ವಾಮ್ಯದ ಪತ್ರಿಕೆಗಳೂ ಭಾರತ ವಿರುದ್ಧ ಕಿಡಿಕಾರುವುದನ್ನು ಮುಂದುವರಿಸಿವೆ. ಡೋಕ್ಲಾಂ ವಿಚಾರದಲ್ಲಿ ಚೀನವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ. ಗಡಿ ಸಾರ್ವಭೌಮತೆ ಸಮರ್ಥಿಸಿಕೊಳ್ಳಲು ಅದು ಶಕ್ತವಾಗಿದೆ. ಎಂದು ಪೀಪಲ್ಸ್‌ ಡೈಲಿ ಪತ್ರಿಕೆಯ ಲೇಖನವೊಂದರಲ್ಲಿ ಹೇಳಲಾಗಿದೆ. “ಡೋಕ್ಲಾಂನಲ್ಲಿ ಭಾರತದ ಸೇನೆ ಗಡಿ ದಾಟಿರುವುದು ಸಂಪೂರ್ಣ ಅಕ್ರಮ. ಚೀನ ಈ ವಿಚಾರದಲ್ಲಿ ಹಿತಾಸಕ್ತಿ ರಕ್ಷಿಸಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

imran-khan

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

ಟಿವಿ ಚಾನೆಲ್ ನಲ್ಲಿ ಹವಾಮಾನ ವರದಿ ವೇಳೆ ದಿಢೀರ್ “ನಗ್ನ” ದೃಶ್ಯ ಪ್ರಸಾರ

ಟಿವಿ ಚಾನೆಲ್ ನಲ್ಲಿ ಹವಾಮಾನ ವರದಿ ವೇಳೆ ದಿಢೀರ್ “ನಗ್ನ” ದೃಶ್ಯ ಪ್ರಸಾರ

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.