ಒಂದು ಗುಂಡು ಹೊಡೆದರೂ ನಿಮಗೆ ಬೆಂಕಿ ಬೀಳುತ್ತೆ: ಇರಾನ್‌

Team Udayavani, Jun 23, 2019, 5:00 AM IST

ಟೆಹ್ರಾನ್‌: ಇರಾನ್‌ಗೆ ಒಂದು ಬುಲೆಟ್ನಿಂದ ದಾಳಿ ನಡೆಸಿದರೂ ಅಮೆರಿಕ ಮತ್ತು ಅಮೆರಿಕದ ಮಿತ್ರರ ಹಿತಾಸಕ್ತಿಗಳಿಗೆ ಬೆಂಕಿ ಬೀಳಲಿದೆ ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಕಳೆದ ಗುರುವಾರ ಇರಾನ್‌ ಗಡಿಯಲ್ಲಿ ಅಮೆರಿಕದ ಡ್ರೋನ್‌ ಒಂದನ್ನು ಇರಾನ್‌ ಹೊಡೆದುರುಳಿಸಿದ ಅನಂತರ ಅಮೆರಿಕ ಹಾಗೂ ಇರಾನ್‌ ಮಧ್ಯದ ಬಿಕ್ಕಟ್ಟು ಉಲ್ಬಣಿಸಿದೆ. ಇರಾನ್‌ ಕ್ರಮಕ್ಕೆ ಪ್ರತೀಕಾರವಾಗಿ ಅಮೆರಿಕ ದಾಳಿ ನಡೆಸಲು ಸಜ್ಜಾಗಿತ್ತಾದರೂ ಕೊನೆ ಕ್ಷಣದಲ್ಲಿ ಹಿಂದೆಗೆದಿತ್ತು. ಅಲ್ಲದೆ ಈ ಬಗ್ಗೆ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆಯನ್ನೂ ನೀಡಿದ್ದರು.

ಈ ಬಗ್ಗೆ ಶನಿವಾರ ಮಾತನಾಡಿದ ಇರಾನ್‌ ಸಶಸ್ತ್ರ ಪಡೆಗಳ ವಕ್ತಾರ ಬ್ರಿಗೆಡಿಯರ್‌ ಜನರಲ್ ಅಬೋಲ್ಫ‌ಜಲ್ ಶೆಕಾರ್ಚಿ, ಸದ್ಯ ಈ ಭಾಗದಲ್ಲಿ ಸನ್ನಿವೇಶ ಇರಾನ್‌ ಪರವಾಗಿದೆ. ಒಂದು ವೇಳೆ ನಮ್ಮ ಶತ್ರುವು ಒಂದೇ ಒಂದು ಬುಲೆಟ್ ನಮ್ಮ ಮೇಲೆ ಹಾರಿಸಿದರೂ ಅದರಿಂದಾಗಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿ ಅಗ್ನಿಗಾಹುತಿಯಾಗುತ್ತದೆ ಎಂದಿದ್ದಾರೆ. ಇನ್ನು, ಅಮೆರಿಕದ ಯಾವುದೇ ದಾಳಿಗೂ ನಾವು ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ ಎಂದು ಇರಾನ್‌ ಹೇಳಿದೆ.

ವಾಯುಮಾರ್ಗ ಬದಲು
ಅಮೆರಿಕ ಮತ್ತು ಇರಾನ್‌ ಮಧ್ಯದ ಸಂಘರ್ಷ ತಾರಕಕ್ಕೇರುತ್ತಿರುವುದರಿಂದಾಗಿ ಭಾರತದ ನಾಗರಿಕ ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ. ಇರಾನ್‌ ವಾಯುಮಾರ್ಗವನ್ನು ಬಿಟ್ಟು, ಪರ್ಯಾಯ ಮಾರ್ಗವನ್ನು ಬಳಸಲು ನಿರ್ಧರಿಸಲಾಗಿದೆ. ಈ ಸಂಬಂಧ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ ಡಿಜಿಸಿಎ ಪ್ರಕಟನೆ ಹೊರಡಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ