ಪಾಕ್‌ ಸೇನೆಯ ಅಚ್ಚರಿಯ ಕ್ರಮ : ಐಎಸ್‌ಐ ಬೇಹು ಸಂಸ್ಥೆಗೆ ಹೊಸ ಮುಖ್ಯಸ್ಥ ನೇಮಕ

Team Udayavani, Jun 17, 2019, 5:13 PM IST

ಇಸ್ಲಾಮಾಬಾದ್‌ : ಅತ್ಯಂತ ಅಚ್ಚರಿಯ ಕ್ರಮವಾಗಿ ಪಾಕ್‌ ಸೇನೆ, ಇಂಟರ್‌ ಸರ್ವಿಸಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಬೇಹು ಸಂಸ್ಥೆಗೆ ಲೆ. ಜನರಲ್‌ ಫೈಜ್‌ ಹಮೀದ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ.

ಪಾಕ್‌ ಸೇನೆಯ ಮಾಧ್ಯಮ ವಿಭಾಗ ಇಂದು ಹೊರಡಿಸಿರುವ ಅಧಿಕೃತ ಪ್ರಕಟನೆಯಲ್ಲಿ ಲೆ. ಜನರಲ್‌ ಫೈಜ್‌ ಹಮೀದ್‌ ಅವರನ್ನು ಐಎಸ್‌ಐ ಮಹಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.

ಎಂಟು ತಿಂಗಳ ಹಿಂದಷ್ಟೇ ಐಎಸ್‌ಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಲೆ.ಜ. ಆಸೀಮ್‌ ಮುನೀರ್‌ ಅವರನ್ನು ಎತ್ತಂಗಡಿ ಮಾಡಿ ಗುಜ್ರನ್‌ವಾಲಾ ಸೇನಾ ಕಮಾಂಡರ್‌ ಆಗಿ ನೇಮಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ