“ಲಸ್ಸಿ, ಸಟ್ಟುವಿನಂತಹ ಸ್ಥಳೀಯ ಪಾನೀಯಗಳನ್ನೇ ಕುಡಿಯಿರಿ ಪ್ಲೀಸ್!”
ಪಾಕ್‌ನ ಉನ್ನತ ಶಿಕ್ಷಣ ಆಯೋಗ ಪ್ರಕಟನೆ
Team Udayavani, Jun 26, 2022, 7:50 AM IST
ಇಸ್ಲಾಮಾಬಾದ್: ಚಹಾ ಪುಡಿ ಆಮದಿಗೆ ಪಾಕಿಸ್ಥಾನ ಸಾಲ ಮಾಡುತ್ತಿದ್ದು, ಪಾಕಿಸ್ಥಾನಿಗರು ಚಹಾ ಕುಡಿಯುವುದನ್ನು ಕಡಿಮೆ ಮಾಡಬೇಕೆಂದು ಸಚಿವರು ಹೇಳಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.
ಅದಕ್ಕೆ ಪೂರಕವಾಗಿ ಪಾಕ್‌ನ ಉನ್ನತ ಶಿಕ್ಷಣ ಆಯೋಗದ ಮುಖ್ಯಸ್ಥ ರಾಗಿರುವ ಡಾ| ಶೈಸ್ತಾ ಸೊಹಾಲಿ ಅವರು ಇತ್ತೀಚೆಗೆ ಎಲ್ಲ ಖಾಸಗಿ ವಿವಿಗಳ ಉಪಕುಲಪತಿಗಳಿಗೆ ಪ್ರಕಟನೆಯೊಂದನ್ನು ಹೊರಡಿಸಿದ್ದಾರೆ.
ಅದರಲ್ಲಿ “ಉದ್ಯೋಗಾವಕಾಶವನ್ನು ಹೆಚ್ಚಿಸುವ ಮತ್ತು ಚಹಾ ಆಮದು ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಲಸ್ಸಿ, ಸಟ್ಟುವಿನಂತಹ ಸ್ಥಳೀಯ ಪಾನೀಯಗಳ ಬಳಕೆ ಹೆಚ್ಚಬೇಕು.
ಸ್ಥಳೀಯ ಪಾನೀಯಗಳನ್ನು ಶೈಕ್ಷಣಿಕ ಸಂಸ್ಥೆಗಳು ಪ್ರಚಾರ ಮಾಡಬೇಕು’ ಎಂದು ನಮೂದಿಸಲಾಗಿದೆ.